ADVERTISEMENT

ಯುದ್ಧದಲ್ಲಿ ಹೋರಾಡಲು ಸೇನೆಯಲ್ಲಿ ಅವಕಾಶ ನೀಡಿ: ರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ

ರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ ಬರೆದ ಯುವಕ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 16:56 IST
Last Updated 21 ಜೂನ್ 2020, 16:56 IST
ರಕ್ಷದಲ್ಲಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತಿರುವ ಲಕ್ಷ್ಮಣ ಮಡಿವಾಳ
ರಕ್ಷದಲ್ಲಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತಿರುವ ಲಕ್ಷ್ಮಣ ಮಡಿವಾಳ   

ಮಸ್ಕಿ: ಚೀನಾ ಮತ್ತು ಭಾರತ ನಡುವೆ ಯುದ್ಧ ನಡೆದಲ್ಲಿ, ಚೀನಾದ ವಿರುದ್ಧ ಹೋರಾಡಲು ಭಾರತೀಯ ಸೇನೆಯಲ್ಲಿ ಅವಕಾಶ ನೀಡುವಂತೆ ಕೋರಿ ಹೋಂ–ಗಾರ್ಡ್ ಸಿಬ್ಬಂದಿ ಲಕ್ಷ್ಮಣ ಮಡಿವಾಳ ಅವರು ಭಾನುವಾರ ರಾಷ್ಟ್ರಪತಿಗೆ ರಕ್ತದಲ್ಲಿ ಮೂರು ಪುಟಗಳ ಪತ್ರ ಬರೆದಿದ್ದಾರೆ.

‘ನನ್ನ ದೇಶದ ರಕ್ಷಣೆ ನನ್ನ ಕರ್ತವ್ಯ. ಯೋಧರು ಹುತಾತ್ಮರಾಗಿದ್ದು ವ್ಯರ್ಥವಾಗಬಾರದು. ದೇಶವೆಂದರೆ ನನಗೆ ಪಂಚಪ್ರಾಣ. ದೇಶಕ್ಕಾಗಿ ಏನೂ ಬೇಕಾದರೂ ಮಾಡಲು ಸಿದ್ಧನಿದ್ದೇನೆ’ ಎಂದು ಲಕ್ಷ್ಮಣ ಮಡಿವಾಳ ಪತ್ರದಲ್ಲಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಜೈಹಿಂದ್ ಭಗತ್ ಸಿಂಗ್ ಉಚಿತ ತರಬೇತಿ ಕೇಂದ್ರ ನಡೆಸುತ್ತಿರುವ ಅವರು ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಮತ್ತು ವಿವಿಧ ಕ್ರೀಡೆಗಳ ಕುರಿತು ತರಬೇತಿ ನೀಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.