ADVERTISEMENT

ಮಸ್ಕಿ ನಾಲಾ ಜಲಾಶಯ ಭರ್ತಿ: ಗ್ರಾಮಸ್ಥರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 7:25 IST
Last Updated 25 ಜುಲೈ 2020, 7:25 IST

ಮಸ್ಕಿ: ತಾಲ್ಲೂಕಿನ ಮಾರಲದಿನ್ನಿ ಬಳಿಯ ಮಸ್ಕಿ ಜಲಾಶಯ ಭರ್ತಿಯಾಗಿದ್ದು ಯಾವುದೇ ಕ್ಷಣದಲ್ಲಿ ಜಲಾಶಯದ ಮೂಲಕ ನೀರು ಬಿಡಲಾಗುವುದು ಎಂದು ಯೋಜನೆಯ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಾವುದ್ ತಿಳಿಸಿದ್ದಾರೆ.

29 ಅಡಿ ನೀರು ಸಂಗ್ರಹ (0;5 ಟಿಎಂಸಿ) ದ ಜಲಾಶಯ ಭರ್ತಿಗೆ ಇನ್ನೂ ಎರಡು ಅಡಿ ಮಾತ್ರ ಇದೆ. ನೀರಿನ ಒಳ ಹರಿವು ಹೆಚ್ಚಿರುವ ಕಾರಣ ಯಾವುದೇ ಕ್ಷಣದಲ್ಲಿ ಜಲಾಶಯದ ನಾಲ್ಕು ಗೇಟ್ ಮೂಲಕ ನೀರು ಬಿಡಲಾಗುವುದು. ಮಸ್ಕಿ ಹಳ್ಳದ ಪಾತ್ರದ ದಂಡೆ ಮೇಲಿನ ಗ್ರಾಮಸ್ಥರು ಹಳ್ಳದಲ್ಲಿ ಇಳಿಯಬಾರದು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT