ADVERTISEMENT

ರಾಯಚೂರು: ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ಕನ್ಹಯ್ಯ ಲಾಲ್‌ ಕೊಲೆ ಪ್ರಕರಣ ಖಂಡಿಸಿ, ಹಿಂದೂ ಸಮಾಜದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 3:01 IST
Last Updated 2 ಜುಲೈ 2022, 3:01 IST
ಮಸ್ಕಿ ಪಟ್ಟಣದಲ್ಲಿ ಹಿಂದೂ ಸಮಾಜದಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಕವಿತಾ ಅವರಿಗೆ ಮನವಿ ಸಲ್ಲಿಸಲಾಯಿತು
ಮಸ್ಕಿ ಪಟ್ಟಣದಲ್ಲಿ ಹಿಂದೂ ಸಮಾಜದಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಕವಿತಾ ಅವರಿಗೆ ಮನವಿ ಸಲ್ಲಿಸಲಾಯಿತು   

ಮಸ್ಕಿ: ರಾಜಸ್ಥಾನದ ಉದಯಪುರದ ಟೇಲರ್‌ ಕನ್ಹಯ್ಯ ಲಾಲ್ ಅವರ ಕೊಲೆ ಪ್ರಕರಣವನ್ನು ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಹಿಂದೂ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ಹಯ್ಯ ಲಾಲ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹೆದ್ದಾರಿ ಮೇಲೆ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲ ಸಮಯ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಹಿಂದೂ ಸಮಾಜದ ಮುಖಂಡ ಎನ್.ಶಿವಕುಮಾರ, ಪ್ರಸನ್ನ ಪಾಟೀಲ್, ಅಪ್ಪಾಜಿಗೌಡ, ಅಭಿಜಿತ್ ಪಾಟೀಲ್, ಟೇಲರ್ ಸಂಘದ ಬಾಹರ ಅಲಿ, ಮಲ್ಲಯ್ಯ ಪಗಡೇಕಲ್ ಸೇರಿದಂತೆ ಅನೇಕರು ಮಾತನಾಡಿ, ಘಟನೆಯನ್ನು ಖಂಡಿಸಿದರು.

ADVERTISEMENT

ಡಾ.ಶಿವಶರಣಪ್ಪ ಇತ್ಲಿ, ಡಾ.ಮಲ್ಲಿಕಾರ್ಜುನ, ಜಿ.‌ವೆಂಕಟೇಶ ನಾಯಕ, ಮೌನೇಶ ನಾಯಕ, ರಾಕೇಶ ಪಾಟೀಲ್, ವಸಂತಕುಮಾರ, ಸಿದ್ಧಲಿಂಗಯ್ಯ ಸೊಪ್ಪಿಮಠ ಸೇರಿದಂತೆ ಅನೇಕ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸರ್ಕಲ್ ಇನ್‌ಸ್ಪೆಕ್ಟರ್ ಸಂಜೀವ್ ಬಳಿಗಾರ, ಸಬ್ ಇನ್‌ಸ್ಪೆಕ್ಟರ್ ಸಿದ್ಧರಾಮ, ಪ್ರಕಾಶ ಡಂಬಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.