ADVERTISEMENT

ರಾಯಚೂರು| ತಾಯಿ ಮಕ್ಕಳ ಆಸ್ಪತ್ರೆ: ತಿಂಗಳಲ್ಲಿ 200 ಹೆರಿಗೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 8:10 IST
Last Updated 31 ಅಕ್ಟೋಬರ್ 2025, 8:10 IST
ರಾಯಚೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ
ರಾಯಚೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ   

ರಾಯಚೂರು: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ತಿಂಗಳಲ್ಲಿ 200 ಮಹಿಳೆಯರ ಹೆರಿಗೆ ಆಗಿದೆ.

'ನಿಮ್ಮ ಆರೋಗ್ಯ ನಮ್ಮ ಆಧ್ಯತೆ' ಧ್ಯೇಯ್ಯವಾಕ್ಯಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸಿದ ಪರಿಣಾಮ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಹೇಳಿದ್ದಾರೆ.

ಈ ಆಸ್ಪತ್ರೆಯು 2024ರ ಆಗಸ್ಟ್ 15 ರಂದು ನಗರದಲ್ಲಿ ಆರಂಭವಾಗಿದೆ. ವರ್ಷದೊಳಗೆ 1209 ಹೆರಿಗೆಗಳು ಆಗಿವೆ. ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ನಿರ್ವಹಣೆ, ಮಕ್ಕಳ ಆರೈಕೆ ಚಿಕಿತ್ಸೆಗೆ ಆಡಳಿತ ವೈದ್ಯಾಧಿಕಾರಿ ರೇಡಿಯಾಲಜಿಸ್ಟ್ ಡಾ.ಪ್ರಜ್ವಲಕುಮಾರ, ಜಿಲ್ಲಾ ಆರ್‌ಸಿೆಚ್ ಅಧಿಕಾರಿ ಡಾ. ನಂದಿತಾ ಎಂ.ಎನ್, ಆಸ್ಪತ್ರೆಯಲ್ಲಿನ ನಾಲ್ವರು ಪ್ರಸೂತಿ ತಜ್ಞರು, ಮೂವರು ಮಕ್ಕಳ ತಜ್ಞರು ಹಾಗೂ ನಗರದ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು, ಸ್ನಾತ್ತಕೋತ್ತರ ವೈದ್ಯ ವಿಧ್ಯಾರ್ಥಿಗಳ ಸಹಕಾರ ದೊರೆತಿದೆ.

ADVERTISEMENT

ಬಡ, ಮಧ್ಯೆಮ ವರ್ಗದ ಜನರಿಗೆ ವೈದ್ಯಕೀಯ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ವೈದ್ಯಕೀಯ ಸೇವೆ ಕಲ್ಪಿಸುತ್ತಿದೆ. ರಾಯಚೂರನಲ್ಲಿನ ತಾಯಿ ಮಕ್ಕಳ ಆಸ್ಪತ್ರೆಯು ಜನಸ್ನೇಹಿಯಾಗಿದೆ ಎಂದು ತಿಳಿಸಿದ್ದಾರೆ.

ಇಲ್ಲಿನ ಸೌಕರ್ಯ ಪಡೆಯಲು ಪಕ್ಕದ ಯಾದಗಿರಿ, ತೆಲಂಗಾಣದ ಜನರು ಆಗಮಿಸುತ್ತಿದ್ದಾರೆ. ಜನ ಸಾಮಾನ್ಯರು ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಆಗಮಿಸಿ ಅಲ್ಲಿನ ವೈದ್ಯಕೀಯ ಸೌಕರ್ಯಗಳ ಲಾಭ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.