ಹಟ್ಟಿ ಚಿನ್ನದ ಗಣಿ: ಹಟ್ಟಿ ಸಮೀಪದ ಗೋಲಪಲ್ಲಿಬಳಿ ಭಾನುವಾರ ಸರಣಿ ಅಪಘಾತದ ನಡೆದಿದ್ದು, ಪ್ರಾಣಾಪಾಯವಾಗಿಲ್ಲ.
ಗುರುಗುಂಟಾ ಸಮೀಪದ ರಾಜ್ಯ ಹೆದ್ದಾರಿ 150(ಎ) ಗೋಲಪಲ್ಲಿ ಬಳಿ ರಸ್ತೆ ಅಪಘಾತದಲ್ಲಿ ಸಂಬವಿಸಿದ್ದು, ಲಾರಿಗಳ ಮಧ್ಯೆ ಬೈಕ್ ಸಿಲುಕಿ ನುಜ್ಜಾಗಿದೆ. ಬೈಕ್ ಸವಾರ ಪ್ರಣಾಪಾಯದಿಂದ ಪಾರಾಗಿದ್ದಾನೆ. ಲಾರಿ ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಧಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ರಸ್ತೆ ಅಪಘಾತದಲ್ಲಿ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿದ್ದರಿಂದ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ವಾಹನಗಳು ಯಲಗಟ್ಟಾ–ಗೌಡೂರು ಮೂಲಕ ಸಂಚಾರ ಮಾಡಿದವು. .
ಗೋಲಪಲ್ಲಿಬಳಿ ಅಪಘಾತದ ವಲಯ ಮಾಡಬೇಕು ಎಂದು ಒತ್ತಾಯಿಸಿದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸುತ್ತಿಲ್ಲಎಂದು ವಾಹನ ಸವಾರರು ದೂರಿದರು.
ಸ್ಧಳಕ್ಕೆ ಹಟ್ಟಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಕ್ರೇನ್ ಮೂಲಕ ಲಾರಿಗಳನ್ನು ತೆರವುಗೊಳಿಸಲಾಯಿತು. ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.