ADVERTISEMENT

ಕಠಿಣ ಪರಿಶ್ರಮದಿಂದ ಗುರಿ ಸಾಧಿಸಿ: ಮಲ್ಲಿಕಾರ್ಜುನಗೌಡ

ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ಅವರ 223ನೇ ಜನ್ಮಾದಿನಾಚರಣೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 13:21 IST
Last Updated 27 ಡಿಸೆಂಬರ್ 2020, 13:21 IST
ರಾಯಚೂರಿನ ಗಾಲಿಬ್ ಮೆಮೊರಿಯಲ್ ಟ್ರಸ್ಟ್ ಕಚೇರಿಯಲ್ಲಿ ಭಾನುವಾರ ನವೀಕರಿಸಿದ ಗ್ರಂಥಾಲಯ ಉದ್ಘಾಟನೆ, ಮಿರ್ಜಾ  ಗಾಲಿಬ್ ಅವರ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಮಾತನಾಡಿದರು
ರಾಯಚೂರಿನ ಗಾಲಿಬ್ ಮೆಮೊರಿಯಲ್ ಟ್ರಸ್ಟ್ ಕಚೇರಿಯಲ್ಲಿ ಭಾನುವಾರ ನವೀಕರಿಸಿದ ಗ್ರಂಥಾಲಯ ಉದ್ಘಾಟನೆ, ಮಿರ್ಜಾ  ಗಾಲಿಬ್ ಅವರ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಮಾತನಾಡಿದರು   

ರಾಯಚೂರು: ಮಿರ್ಜಾ ಗಾಲಿಬ್ ಅವರು ಒಬ್ಬ ಶ್ರೇಷ್ಠ ಗಜಲ್ ಕವಿಯಾಗಿದ್ದು, ಉರ್ದು ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಒಬ್ಬ ವ್ಯಕ್ತಿಯ ಸಾವಿನ ನಂತರೂ ನೆನೆಯಬೇಕಾದರೆ ಅಂತಹ ಸಾಧನೆ ಹಾಗೂ ಅವರ ಕೊಡುಗೆಯಿಂದ ಮಾತ್ರ ಇದು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಬಳಿಯ ಗಾಲಿಬ್ ಮೆಮೊರಿಯಲ್ ಟ್ರಸ್ಟ್ ನ ನವೀಕರಿಸಿದ ಗ್ರಂಥಾಲಯ ಉದ್ಘಾಟನೆ, ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ಅವರ 223ನೇ ಜನ್ಮಾದಿನಾಚರಣೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಾ ಧರ್ಮಗಳ ಸಾರ ಒಂದೆಯಾಗಿದೆ. ಸಭ್ಯತೆ, ಸಂಸ್ಕೃತಿ, ಮಾನವೀಯ ಮೌಲ್ಯಗಳಗಳ ಅಳವಡಿಸಿಕೊಳ್ಳಬೇಕು. ಕಳೆದು ಹೊದ ಸಮಯ ಮರಳಿ ಬಾರದು, ಓದು ಮನುಷ್ಯನ ಜೀವನ ಹಸನಾಗಿ ಮಾಡುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿ ಇರಬೇಕು. ಗುರಿ ಸಾಧನೆಗೆ ಕಠಿಣ ಶ್ರಮಪಟ್ಟರೆ ಯಶಸ್ವಿಯಾಗಲು ಸಾಧ್ಯ ಎಂದರು.

ADVERTISEMENT

ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ರಜಾಕ್ ಉಸ್ತಾದ್ ಮಾತನಾಡಿ, ಶಿಕ್ಷಣದ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ಗಾಲಿಬ್ ಮೆಮೊರಿಯಲ್ ಟ್ರಸ್ಟ್ ಸ್ಥಾಪಿಸಲಾಗಿದೆ. ಸಮಾಜದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಸಲು ಅವರಿಗೆ ಉಚಿತ ತರಬೇತಿ ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ ಈಗಾಗಲೇ ಸಾವಿರಾರು ಪುಸ್ತಕಗಳನ್ನು ಖರೀದಿಲಾಗಿದೆ ಎಂದು ಹೇಳಿದರು.

ಈ ವೇಳೆ ಎ.ಜೆ.ಅಕಾಡೆಮಿ ನಿರ್ದೇಶಕ ಮೊಹಮ್ಮದ್ ಅಬ್ದುಲ್ಲಾ ಜಾವಿದ್, ಗಾಲಿ‌ಬ್ ಮೆಮೊರಿಯಲ್ ಟ್ರಸ್ಟ್ ನ ಅಧ್ಯಕ್ಷ ಸೈಯದ್ ತಾರಿಖ್ ಹಸನ್ ರಝ್ವಿ, ನೂರ್ ಮೊಹಮ್ಮದ್, ಖೈಸರ್ ರಜಾಕ್ ಮೊಹಿಯುದ್ದೀನ್, ಅಬ್ದುಲ್ ರಹೀಮ್ ಖಾನ್, ಮಲ್ಲಿಕಾರ್ಜುನ, ಅನ್ವರ್ ವಹೀದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.