ರಾಯಚೂರು: ದೇಶದ ಪ್ರಸ್ತುತ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹಸಚಿವಾಲಯ 244 ಜಿಲ್ಲೆಗಳನ್ನು ಅತಿ ಸೂಕ್ಷ್ಮ ಜಿಲ್ಲೆಗಳು ಎಂದು ಗುರುತಿಸಿದೆ. ಕರ್ನಾಟಕದ ರಾಜ್ಯದಲ್ಲಿ ಬೆಂಗಳೂರು, ಮಲ್ಲೇಶ್ವರಂ ಹಾಗೂ ರಾಯಚೂರು ಜಿಲ್ಲೆಗಳು ಸೇರಿವೆ.
ಕೇಂದ್ರ ಗೃಹಸಚಿವಾಲಯದ ನಿರ್ದೇಶನದಂತೆ ಮುಂದೆ ಆಗಬಹುದಾದ ಎಲ್ಲ ರೀತಿಯ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸನ್ನದ್ಧರಾಗಿರಲು ಮೇ9ರಂದು ಸಂಜೆ 4 ಗಂಟೆಗೆ ಆರ್‌ಟಿಪಿಎಸ್ ಹೆಲಿಪ್ಯಾಡ್ ಆವರಣದಲ್ಲಿ ‘ಆಪರೇಷನ್ ಅಭ್ಯಾಸ್’ ನಾಗರಿಕ ರಕ್ಷಣಾ ಅಣುಕು ಪ್ರದರ್ಶನ ಕಾರ್ಯಕ್ರಮ ‘ಆಪರೇಷನ್ ಅಭ್ಯಾಸ್’ ನಡೆಯಲಿದೆ.
ಯುದ್ಧ ಸಂಭವಿಸಿದರೆ ಅಥವಾ ಇಂತಹ ಯಾವುದೇ ಘಟನೆ ಜರುಗಿದರೆ ಭಯಪಡೆದೇ ಸನ್ನಿವೇಶವನ್ನು ಧೈರ್ಯದಿಂದ ಎದುರಿಸಲು ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳನ್ನು ಅಣಕು ಪ್ರದರ್ಶನದ ಮೂಲಕ ವಿವರಿಸಲಾಗುತ್ತದೆ.
ಶಕ್ತಿನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ವಾಸಿಸುವ ಎಲ್ಲ ಜನ ಆಗಮಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.