ಮುದಗಲ್: ಪಟ್ಟಣದಲ್ಲಿ ನಡೆಯುವ ಗೌರಿ–ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಭಾವೈದಿಂದ ಆಚರಣೆ ಮಾಡಬೇಕು ಎಂದು ರಾಯಚೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶಕುಮಾರ ಮಂಗಳವಾರ ಹೇಳಿದರು.
ಪಟ್ಟಣದ ನೀಲಕಂಠೇಶ್ವರ ದೇಸವ್ಥಾನದ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಇಲಾಖೆ ಹೊರಡಿಸಿದ ನಿಯಮಗಳ, ಮಾರ್ಗಸೂಚಿಗಳ ಪಾಲನೆ ಮಾಡಬೇಕು. ಗಣೇಶ ವಿಸರ್ಜನೆಗೆ ಹೋಗುವ ಮಾರ್ಗದಲ್ಲಿ ಸಿಸಿ ಕ್ಯಾಮರ್ ಅಳವಡಿಸಬೇಕು. ಕಾನೂನು ಮೀರಿ ಮಧ್ಯ ಮಾರಾಟ ಮಾಡುವುದು ಕಂಡುಬಂದರೆ ಕಾನೂನು ಕ್ರಮ ತಗೆದುಕೊಳ್ಳುತ್ತೇವೆ. ಶಾಂತಿಯುತವಾಗಿ ಮೆರವಣೆಗೆ ಮಾಡಬೇಕು. ವಿಸರ್ಜನೆಗೆ ಹೋಗುವ ವೇಳೆಯಲ್ಲಿ ವಿದ್ಯುತ್ ಕಡಿತ ಮಾಡಬಾರದು’ ಎಂದರು.
ಗುರುಬಸಪ್ಪ ಸಜ್ಜನ್, ಮೌಲನಾ ಜಮೀರ್ ಅಹ್ಮದ್ ಖಾಜಿ ಸಲಹೆಗಳನ್ನು ನೀಡಿದರು.
ಲಿಂಗಸುಗೂರು ಕೆ.ಡಿ.ಪಿ ಸದಸ್ಯ ರಾಘು ಕುದುರಿ, ಡಿ.ವೈ.ಎಸ್.ಪಿ ದತ್ತಾತ್ರೇಯ ಕಾರ್ನಾಡ, ಸಿ.ಪಿ.ಐ ಬಾಲಚಂದ್ರ ಲಕ್ಕಂ, ಪಿ.ಎಸ್.ಐ ವೆಂಕಟೇಶ ಮಾಡಗೇರಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಭೋಗಾರ, ಅಬಕಾರಿ ನಿರೀಕ್ಷಕಿ ಲಕ್ಷ್ಮೀ, ಅಗ್ನಿ ಶಾಮಕ ದಳದ ಅಧಿಕಾರಿ ಹೊನ್ಪಪ್ಪ, ಜೆಸ್ಕಾಂ, ಜೆಸ್ಕಾಂ ಅಧಿಕಾರಿ ಬನ್ನೆಪ್ಪ, ಪುರಸಭೆಯ ಸದಸ್ಯರಾದ ಅಮೀರಬೇಗ್ ಉಸ್ತಾದ್, ಮೈಬೂಬಸಾಬ ಕಡ್ಡಿಪುಡಿ, ಕರವೇ ಅಧ್ಯಕ್ಷ ಎಸ್.ಎ.ನಯೀಮ್, ಮುಖಂಡರಾದ ನ್ಯಾಮತ್ ಖಾದ್ರಿ,, ಮಲ್ಲಪ್ಪ ಹೂಗಾರ, ತಿಪ್ಪಣ್ಣ ರಾಠೋಡ, ರೆಹಮಾನ್ ದೂಲಿ ಜಂಬಾಳಿ, ನಾಗರಾಜ ತಳವಾರ, ರವಿ ಕಟ್ಟಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.