
ಮುದಗಲ್: ಸಮೀಪದ ಕಲ್ಯಾಣ ಆಶ್ರಮದಲ್ಲಿ ಮಹಾಂತ ಸ್ವಾಮೀಜಿ ಸಾಲಿಮಠ ಅವರ ಷಷ್ಠಬ್ಧಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ,‘ಮಹಾಂತ ಸ್ವಾಮೀಜಿ ಅವರ 60ರ ವಸಂತವನ್ನು ಆಚರಿಸಬೇಕು. ಕಾರ್ಯಕ್ರಮಕ್ಕೆ ಬರುವವರಿಗೆ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದರು.
ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಮಾತನಾಡಿ,‘2027ರ ಫೆ.2, 3 ಅಥವಾ 4ರಂದು ವಿಶೇಷ ಕಾರ್ಯಕ್ರಮ ನಡೆಸಬೇಕು. 63 ದಿನ ಬಸವ ಪುರಾಣ ಪ್ರವಚನ, ಪೂಜ್ಯರ ಗೌರವ ಗ್ರಂಥ ಸಮರ್ಪಣೆ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಾಡಿನ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದರು.
ಬೆಳಗಾವಿ–ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಅಥಣಿ ಮೊಟಾಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿದರು. ಡಾ.ಶಿವಶರಣಪ್ಪ ಇತ್ಲಿ, ಸುರೇಂದ್ರ ಗೌಡ ಪಾಟೀಲ, ಗುರುಬಸಪ್ಪ ಸಜ್ಜನ್, ಸಂಗಮೇಶ ಗುರು, ಪಂಪನಗೌಡ ಪಾಟೀಲ ಕನ್ನಾಳ, ಎಚ್.ಬಿ.ಮುರಾರಿ, ಶೀತಲ ಸೇಠ್, ಮಹೇಶ ವಸ್ತ್ರದ, ಹನುಮಂತಪ್ಪ ಕಂದಗಲ್, ದೊಡ್ಡ ಸಿದ್ದಯ್ಯ, ಅನಿಲ ಕುಮಾರ ಬುಶಟ್ಟಿ ಹಾಗೂ ಚಂದ್ರಶೇಖರ ಗಂಗಾವತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.