ಮುದಗಲ್: ಜು.31 ರಂದು ಪಟ್ಟಣ ರಾಘವೇಂದ್ರ ಸ್ವಾಮಿ ಮಠದ ಸುವರ್ಣ ಮಹೋತ್ಸವ ಜರುಗಲಿದೆ ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ನಾರಾಯಣರಾವ ದೇಶಪಾಂಡೆ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರಾವಣ ಶುದ್ಧ ಸಪ್ತಮಿ ಜು.31ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಅ. 13 ರವರೆಗೆ ಜರುಗುತ್ತದೆ. ಜು.20 ರಂದು ಮಂತ್ರಾಲಯ ಸುಭುಧೇಂದ್ರ ತೀರ್ಥರ ನೇತ್ರತ್ವದಲ್ಲಿ ಉದ್ಘಾಟನೆ ಹಾಗೂ ಮೂಲರಾಮ ದೇವರ ಪೂಜೆ ಜರುಗುತ್ತದೆ. ಜು.31 ಕೆ. ಅಪ್ಪಣ್ಣಾಚಾರ್ಯರ ಮಾರ್ಗದರ್ಶನದಲ್ಲಿ ಪ್ರಾಣ ಪ್ರತಿಷ್ಠಾಪನೆಯ 50 ಸಂಭ್ರಮಾಚರಣೆ ಸೇರಿದಂತೆ ಸಂಗೀತ ಹಾಗೂ ವಿವಿಧ ಧಾರ್ಮಿಕ ಆಚರಣೆಗಳು ಜರುಗುತ್ತವೆ’ ಎಂದು ಹೇಳಿದರು.
ವೈದ್ಯ ಗುರುರಾಜ ದೇಶಪಾಂಡೆ, ಮಧುಫರಂ ವೆಂಕಟೇಶ ಕುಲಕರ್ಣಿ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.