ADVERTISEMENT

ಮಸ್ಕಿ ಜಲಾಶಯಕ್ಕೆ ಬಾಗಿನ ಸಲ್ಲಿಕೆ

ನಾಲೆಗಳ ಆಧುನೀಕರಣಕ್ಕೆ ₹ 52 ಕೋಟಿ ನೀಡಿದ ಸರ್ಕಾರ: ಪ್ರತಾಪಗೌಡ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 13:53 IST
Last Updated 3 ಜುಲೈ 2022, 13:53 IST
ಮಸ್ಕಿ ಜಲಾಶಯಕ್ಕೆ ಭಾನುವಾರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬಾಗಿನ ಸಲ್ಲಿಸಿದರು
ಮಸ್ಕಿ ಜಲಾಶಯಕ್ಕೆ ಭಾನುವಾರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬಾಗಿನ ಸಲ್ಲಿಸಿದರು   

ಮಸ್ಕಿ: ‘ಮಸ್ಕಿ ಜಲಾಶಯದ ಎಡ ಹಾಗೂ ಬಲದಂಡೆ ಕಾಲುವೆ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ಎಲ್ಲಾ ಉಪ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ನಾನು ಶಾಸಕನಾಗಿದ್ದ ವೇಳೆ ನಡೆಸಿದ ಸತತ ಪ್ರಯತ್ನದಿಂದಾಗಿ ಸರ್ಕಾರ ಇದೀಗ ಎಲ್ಲಾ ಉಪ ಕಾಲುವೆಗಳ ಆಧುನೀಕರಣ ಕಾಮಗಾರಿ ಕೈಗೊಂಡಿದೆ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕೇಳಿದರು.

ತಾಲ್ಲೂಕಿನ ಮಾರಲದಿನ್ನಿ ಬಳಿಯ ಮಸ್ಕಿ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಬಾಗಿನ್ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈತರ ಹಿತಕ್ಕಾಗಿ ನಾಲಾ ಆಧುನಿಕರಣಕ್ಕೆ ಸರ್ಕಾರ ₹ 52 ಕೋಟಿ ಹಣ ಮಂಜೂರು ಮಾಡಿದ್ದು, ಈಗಾಗಲೇ ಆಧುನೀಕರಣ ಕಾಮಗಾರಿಯೂ ಭರದಿಂದ ಸಾಗುತ್ತಿದೆ ಎಂದರು.

ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಲು ಇದು ಅನೂಕೂಲವಾಗಲಿದೆ ಎಂದರು. ಮಸ್ಕಿ ನಾಲಾ ಜಲಾಶಯದ ಭಾಗದಲ್ಲಿ ಈಗಾಗಲೆ ಉತ್ತಮ ಮಳೆಯಾಗಿರುವುದರಿಂದ ಜಲಾಶಯ ತುಂಬಿದ್ದು, ರೈತರಿಗೆ ಎರಡು ಬೆಳೆಗಳಿಗೆ ಅನೂಕೂಲವಾಗಲಿದೆ ಎಂದರು. ಈ ಭಾಗದ ರೈತರ ಅನೂಕೂಲಕ್ಕಾಗಿ ಜಲಾಶಯ ಎತ್ತರಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಯೋಚಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ವಿಸ್ತರಣೆ ಮಾಡಲು ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಇರುವ ನೀರನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ADVERTISEMENT

ಉತ್ತಮ ಬೆಳೆಗಳನ್ನು ಕಾಲುವೆ ಆಧುನಿಕರಣ ಕಾಮಗಾರಿ ಉತ್ತಮ ಗುಣಮಟ್ಟದಿಂದ ಮಾಡುವಂತೆ ಸೂಚಿಸಲಾಗಿದೆ ಎಂದರು.

ಮುಖಂಡರಾದ ಮಹಾದೇವಪ್ಪಗೌಡ ಪೊ. ಪಾಟೀಲ್, ಅಮರೇಗೌಡ ವಿರುಪಾಪುರ, ಅಂದಾನಪ್ಪ ಗುಂಡಳ್ಳಿ, ಮಲ್ಲಪ್ಪ ಅಂಕುಶದೊಡ್ಡಿ, ಬಸವಂತರಾಯ ಕುರಿ, ಡಾ.ಪಂಚಾಕ್ಷರಯ್ಯ ಕಂಬಾಳಿಮಠ, ರಡ್ಡೆಪ್ಪ ಹಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಹರಳಳ್ಳಿ, ಶರಣಬಸವ ಸೊಪ್ಪಿಮಠ, ಶರಣಬಸವ ಉಮಲೂಟಿ, ಪುರಸಭೆ ಸದಸ್ಯರಾದ ರವಿಗೌಡ, ಮಲ್ಲಯ್ಯ ಅಂಬಾಡಿ, ವೇಂಕಟೇಶ ನಾಯಕ, ಪ್ರಸನ್ನ ಪಾಟೀಲ್, ಮೌನೇಶ ನಾಯಕ, ಪ್ರಮೀಳಾ ಸೇರಿದಂತೆ ಕಾರ್ಯಕರ್ತರು ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.