ADVERTISEMENT

ರಾಯಚೂರು: ಸಾರಜನಕದಿಂದ ಆಮ್ಲಜನಕ ಪರಿವರ್ತಿಸುವ ಘಟಕ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 17:10 IST
Last Updated 3 ಜೂನ್ 2021, 17:10 IST
ರಾಯಚೂರಿನ ನವೋದಯ ಆಸ್ಪತ್ರೆಯ ಆವರಣದಲ್ಲಿ ರಾಯಕೇಮ್‌ ಮೆಡಿಕೇರ್‌ ಲಿಮಿಟೆಡ್‌ ಕಂಪೆನಿಯಿಂದ ಸ್ಥಾಪಿಸಿರುವ ಆಮ್ಲಜನಕ ಉತ್ಪಾದಿಸುವ ಘಟಕವನ್ನು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಈಚೆಗೆ ಉದ್ಘಾಟಿಸಿ, ಅಧಿಕಾರಿಗಳಿಂದ ಪಡೆದರು
ರಾಯಚೂರಿನ ನವೋದಯ ಆಸ್ಪತ್ರೆಯ ಆವರಣದಲ್ಲಿ ರಾಯಕೇಮ್‌ ಮೆಡಿಕೇರ್‌ ಲಿಮಿಟೆಡ್‌ ಕಂಪೆನಿಯಿಂದ ಸ್ಥಾಪಿಸಿರುವ ಆಮ್ಲಜನಕ ಉತ್ಪಾದಿಸುವ ಘಟಕವನ್ನು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಈಚೆಗೆ ಉದ್ಘಾಟಿಸಿ, ಅಧಿಕಾರಿಗಳಿಂದ ಪಡೆದರು   

ರಾಯಚೂರು: ನಗರದ ರಾಯಕೇಮ್‌ ಮೆಡಿಕೇರ್‌ ಲಿಮಿಟೆಡ್‌ ಕಂಪೆನಿಯಿಂದ ನವೋದಯ ಆಸ್ಪತ್ರೆ ಆವರಣದಲ್ಲಿ ‘ಸಾರಜನಕವನ್ನು ಆಮ್ಲಜನಕ’ಕ್ಕೆ ಪರಿವರ್ತಿಸುವ ಘಟಕ ಸ್ಥಾಪಿಸಿ ಆಸ್ಪತ್ರೆಗೆ ಹಸ್ತಾಂತರಿಸಿದೆ.

ದಿನಕ್ಕೆ ಒಂದು ಟನ್‌ ಆಮ್ಲಜನಕ ದೊರೆಯಲಿದ್ದು, ಇದರಿಂದ 12 ಜಂಬೋ ಸಿಲಿಂಡರ್‌ಗಳನ್ನು ಭರ್ತಿ ಮಾಡಬಹುದಾಗಿದೆ. ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಈಚೆಗೆ ಘಟಕವನ್ನು ಉದ್ಘಾಟಿಸಿದರು. ರಾಯಕೇಮ್‌ ಮ್ಯಾನೇಜರ್‌ ಪ್ರಹ್ಲಾದರಾವ್‌ ಕೆ., ಪರಿಸರ ಅಧಿಕಾರಿ ಶ್ರೀಧರ್‌, ನವೋದಯ ಆಸ್ಪತ್ರೆಯ ಸಿಇಒ ಡಾ.ಅಮೃತರೆಡ್ಡಿ ಇದ್ದರು.

ಐಸಿಇಸಮೂಹ ಕಂಪೆನಿಯ ಪ್ರಾದೇಶಿಕ ನಿರ್ದೇಶಕ ಸುರೇಶ, ಅಂಜನಾ, ಮಸ್ಸೊಮಿ ಅವರು ಆನ್‌ಲೈನ್‌ ಮೂಲಕ ಕಾರ್ಯಕ್ರಮದಲ್ಲಿ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.