ADVERTISEMENT

ಬೋಸರಾಜುಗೆ ಜಿಲ್ಲಾ ಉಸ್ತುವಾರಿ ನೀಡಿ: ಎನ್.ಮಹಾವೀರ್ 

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 14:11 IST
Last Updated 2 ಜೂನ್ 2023, 14:11 IST

ರಾಯಚೂರು: ಜಿಲ್ಲೆಯ ಸಚಿವ ಎನ್.ಎಸ್.ಬೋಸರಾಜ ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಿದ್ದರಿಂದ ಜಿಲ್ಲೆಯ ಅಭಿವೃಧ್ಧಿಗೆ ಅನುಕೂಲವಾಗಲಿದೆ ಎಂದು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷ ಎನ್.ಮಹಾವೀರ ತಿಳಿಸಿದರು.

ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ 10 ವರ್ಷಗಳ ಕಾಲ ಆಡಳಿತ ಸರ್ಕಾರ ಅನ್ಯ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿತ್ತು ಆದ್ದರಿಂದ ಜಿಲ್ಲೆಯು ಅಭಿವೃದ್ಧಿ ಕುಂಠಿತವಾಗಿತ್ತು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೇವಲ ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಧ್ವಜಾರೋಹಣ ಹಾಗೂ ಕೆಡಿಪಿ ಸಭೆಗೆ ಸೀಮಿತಾಗಿದ್ದರು.

ಈ ಬಾರಿ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಎನ್.ಎಸ್.ಬೋಸರಾಜುಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸ್ಥಾನ ನೀಡಿದ್ದು ಶ್ಲಾಘನೀಯ. ಬೋಸರಾಜುಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ವೇಗವಾಗಿ ನಡೆಯಬಹುದು ಹಾಗೂ ಜಿಲ್ಲೆಗೆ ಸಮಗ್ರ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಹೇಳಿದರು.

ADVERTISEMENT

ನಗರದ ಸ್ವಚ್ಛತೆಯ ನಿರ್ವಾಹಣೆಯಲ್ಲಿ ನಗರಸಭೆ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ 2 ದಿನಗಳಿಂದ ಸುರಿದ ಮಳೆಗೆ ನಗರದ ರಾಜಕಾಲುವೆ ಸೇರಿದಂತೆ ಎಲ್ಲಾ ವಾರ್ಡ್ ನ ಕಾಲುವೆಗಳು, ಚರಂಡಿಗಳು ತುಂಬಿದ್ದು ನೀರು ಸರಿಯಾಗಿ ಹೋಗುತ್ತಿಲ್ಲ. ಕಲುಷಿತ ವಾತಾವರಣ ನಿರ್ಮಾಣವಾಗಿದೆ. ತರಕಾರಿ ಮಾರುಕಟಟ್ಎ ನಿರ್ವಹಣೆಯಲ್ಲಿ ಪೌರಾಯುಕ್ತರು ವಿಫಲರಾಗಿದ್ದಾರೆ. ನಗರಸಭೆಯಲ್ಲಿ ಭ್ರಷ್ಠಾಚಾರ ಮಿತಿ ಮೀರಿದ್ದು ಅವರಿಗೆ ಬೇರೆ ಕಡೆ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಪ್ರಭುನಾಯಕ, ಬಸವರಾಜ, ಉದಯಕುಮಾರ, ಶಹಾ ನವಾಜ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.