ADVERTISEMENT

ಪುರಾಣ, ಪ್ರವಚನದಿಂದ ಮನಸ್ಸಿಗೆ ಶಾಂತಿ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 15:31 IST
Last Updated 9 ಅಕ್ಟೋಬರ್ 2019, 15:31 IST
ರಾಯಚೂರಿನ ಡ್ಯಾಡಿ ಕಾಲೊನಿಯಲ್ಲಿ ಈಶ್ವರ ದೇವಸ್ಥಾನ ಸಮಿತಿಯಿಂದ ದಸರಾ ದರ್ಬಾರ ಅಂಗವಾಗಿ ಬುಧವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು
ರಾಯಚೂರಿನ ಡ್ಯಾಡಿ ಕಾಲೊನಿಯಲ್ಲಿ ಈಶ್ವರ ದೇವಸ್ಥಾನ ಸಮಿತಿಯಿಂದ ದಸರಾ ದರ್ಬಾರ ಅಂಗವಾಗಿ ಬುಧವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು   

ರಾಯಚೂರು: ನವರಾತ್ರಿಯ ಸಂದರ್ಭದಲ್ಲಿ ಪುರಾಣ, ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಲಭಿಸಲಿದೆ ಎಂದುಉಜ್ಜಯಿನಿ ಪೀಠದಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಡ್ಯಾಡಿ ಕಾಲೊನಿಯಲ್ಲಿಈಶ್ವರ ದೇವಸ್ಥಾನ ಸಮಿತಿಯಿಂದ ದಸರಾ ದರ್ಬಾರ ಅಂಗವಾಗಿ ಬುಧವಾರ ಆಯೋಜಿಸಿದ್ದಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದ್ದು, ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವದಿಂದ ಕಾಣಬೇಕು. ನವರಾತ್ರಿ ಉತ್ಸವದ ಆಚರಣೆಯಲ್ಲಿ ದುರಾಲೋಚನೆಗಳನ್ನು ಹೊಡೆದೊಡಿಸಿ ಪರಾಶಕ್ತಿಯಾದ ದೇವಿಯನ್ನುಪೂಜಿಸುವ ಮೂಲಕ ಪುನೀತರಾಗಬೇಕು ಎಂದರು.

ADVERTISEMENT

ರಾಜ್ಯದಲ್ಲಿ ನೆರೆ ಹಾಗೂ ಬರದಿಂದ ಜನರು ಸಂಕಷ್ಟದಲ್ಲಿದ್ದು, ನೆರವಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸಬೇಕು.ಇನ್ನುಮುಂದೆ ಉತ್ತಮವಾದ ಮಳೆ– ಬೆಳೆಯಿದೆ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಧರ್ಮಸಭೆಗೂ ಮುನ್ನ ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಡ್ಯಾಡಿ ಕಾಲೊನಿಯವರೆಗೆ ಸ್ವಾಮೀಜಿಯನ್ನು ಸಾರೋಟದಲ್ಲಿ ಕೂಡಿಸಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.

ಬಿಚ್ಚಾಲಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.