ADVERTISEMENT

ರಾಯಚೂರು: ‘ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಹೋರಾಟ ಅನಿವಾರ್ಯ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:02 IST
Last Updated 19 ಅಕ್ಟೋಬರ್ 2025, 6:02 IST
ಹಟ್ಟಿ ಚಿನ್ನದ ಗಣಿ : ಹಟ್ಟಿ ಪಟ್ಟಣದ ಹಳೆ‌ಬಸ್ ನಿಲ್ದಾಣದಲ್ಲಿ ಎಸ್ ಎಫ್ ಐ ಸಂಘಟನೆ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ರಾಜ್ಯ ಮಟ್ಟಡ ಜಾಗೃತಿ ಜಾಥ ನಡೆಯಿತು.
ಹಟ್ಟಿ ಚಿನ್ನದ ಗಣಿ : ಹಟ್ಟಿ ಪಟ್ಟಣದ ಹಳೆ‌ಬಸ್ ನಿಲ್ದಾಣದಲ್ಲಿ ಎಸ್ ಎಫ್ ಐ ಸಂಘಟನೆ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ರಾಜ್ಯ ಮಟ್ಟಡ ಜಾಗೃತಿ ಜಾಥ ನಡೆಯಿತು.   

ಹಟ್ಟಿ ಚಿನ್ನದ ಗಣಿ: ‘ಸಾರ್ವಜನಿಕ ಶಿಕ್ಷಣದ ಆಶಯಗಳು ಉಳಿಯಬೇಕಾದರೆ ವಿದ್ಯಾರ್ಥಿಗಳು ಒಗ್ಗಟ್ಟು ಪ್ರದರ್ಶನ ಅವಶ್ಯ’ ಎಂದು ಎಸ್‌ಎಫ್ಐ ಸಂಘಟನೆ ರಾಜ್ಯ ಉಪಾಧ್ಯಕ್ಷ ದೊಡ್ಡಬಸವರಾಜ ಹೇಳಿದರು.‌

ಹಟ್ಟಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ರಾಜ್ಯ ಮಟ್ಟದ ಜಾಥದಲ್ಲಿ ಗುರುವಾರ ಅವರು ವಿದ್ಯಾರ್ಥಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಲು, ಸರ್ಕಾರಗಳು ಹೊಸ ಶಿಕ್ಷಣ ನೀತಿಗಳನ್ನು ಜಾರಿಗೊಳಿಸುವ ಹುನ್ನಾರ ಮಾಡುತ್ತಿವೆ.  ಅವು ಜಾರಿಯಾದರೆ ಬಡ ಮಕ್ಕಳ ಶಿಕ್ಷಣಕ್ಕೆ ಪೆಟ್ಟು ಬಿಳುತ್ತದೆ. ಅದಕ್ಕೆ ವಿದ್ಯಾರ್ಥಿಗಳು ಜಾಗೃತರಗಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

‘ಕಾರ್ಪೂರೇಟ್ ಸಂಸ್ಧೆಗಳ ಕೈಗೆ ಶಿಕ್ಷಣ ಸಿಲುಕಿ ನರಳುತ್ತಿದೆ. ರಾಜ್ಯದಲ್ಲಿ‌ ಸರ್ಕಾರಿ ಶಾಲೆಗಳು ಮುಚ್ವುತ್ತಿವೆ. ಖಾಸಗಿ ಶಾಲೆಗಳು ನಾಯಿ ಕೊಡೆಯಂತೆ ತಲೆಯೆತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ದುಬಾರಿ ಬೆಲೆಗೆ ಮಾರಿಕೊಳ್ಳುತ್ತಿವೆ’ ಎಂದು ದೂರಿದರು.

ರಾಜ್ಯ ಜಂಟಿ ಕಾರ್ಯದರ್ಶಿ ಗಣೇಶ ರಾಠೋಡ ಮಾತನಾಡಿ, ‘ರಾಜ್ಯದಲ್ಲಿ 2023–24ನೇ ಸಾಲಿನಲ್ಲಿ 54 ಸಾವಿರ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. 11 ಸಾವಿರ ಸರ್ಕಾರಿ ಶಾಲೆ ಮುಚ್ಚುಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ 60 ಸಾವಿರ ಶಿಕ್ಷರಕ ಕೊರತೆಯಿದೆ. ನೇಮಕಾತಿ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ’ ಎಂದು ಆರೋಪಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ರಮೇಶ, ತಾಲ್ಲೂಕು ಅಧ್ಯಕ್ಷ ಗೋವಿಂದ, ಜನವಾದಿ ಮಹಿಳಾ ಸಂಘಟನೆ ತಾಲ್ಲೂಕು ಉಪಾಧ್ಯಕ್ಷೆ ಶಾಂತಕುಮಾರಿ, ಶಹೀರಾ ಬಾನು, ರಜೀಯಾ ಬೇಗಂ, ಸಿಐಟಿಯು ಮುಖಂಡರಾದ ನಿಂಗಪ್ಪ ವೀರಾಪುರ, ಆಜೀಬಾಬಾ, ಸಂಸುದ್ದೀನ್, ಫಯಾಸ್ ರಿಯಾಸ್, ಗೋಪಾಲ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.