ಕವಿತಾಳ: ಪಟ್ಟಣದ ಸರ್ಕಾರಿ ಪಿಯು ಕಾಲೇಜಿಗೆ ಶೇ56.56 ಫಲಿತಾಂಶ ಸಿಕ್ಕಿದೆ. ಕಲಾ ವಿಭಾಗದಲ್ಲಿ 75 ವಿದ್ಯಾರ್ಥಿಗಳ ಪೈಕಿ 36 ಮತ್ತು ವಾಣಿಜ್ಯ ವಿಭಾಗದಲ್ಲಿ 24 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ತಾರಶ್ರೀ ಶೇ 94 (ಪ್ರಥಮ), ಶಿವಮ್ಮ ಶೇ 83 (ದ್ವಿತೀಯ), ಶಿವಲೀಲಾ ಶೇ 80 (ತೃತೀಯ) ಮತ್ತು ವಾಣಿಜ್ಯ ವಿಭಾಗದಲ್ಲಿ ಅಶ್ವಿನಿ ಶೇ 88 (ಪ್ರಥಮ), ವಿನಯಸಿಂಗ್ ಶೇ 88 (ದ್ವಿತೀಯ) ಹಾಗೂ ತಾಯಮ್ಮ ಶೇ 85 (ತೃತೀಯ) ಸ್ಥಾನ ಪಡೆದಿದ್ದಾರೆ ಎಂದು ಪ್ರಾಚಾರ್ಯೆ ಮಹಾಂತಮ್ಮ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.