ರಾಯಚೂರು: ಹೊರ ರಾಜ್ಯದಲ್ಲಿ ವಾಸ್ತವ್ಯದ ನಕಲಿ ಮಾಹಿತಿ ನೀಡಿ ₹15 ಲಕ್ಷ ಮೇಲ್ಪಟ್ಟ ಮೌಲ್ಯದ ಕಾರು, ಜೀಪು ಖರೀದಿಸಿ ಸ್ವಂತಕ್ಕೆ ಹಣ ಉಳಿಸಿಕೊಂಡು ಸಂಭ್ರಮದಲ್ಲಿದ್ದ ಶ್ರೀಮಂತರಿಗೆ ಕರ್ನಾಟಕದ ಪ್ರಾದೇಶಿಕ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ರಾಜ್ಯಕ್ಕೆ ತೆರಿಗೆ ಮೋಸ ಮಾಡಿದವರ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಗರಿಷ್ಠ ಶೇಕಡ 93ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ.
ತೆರಿಗೆ ಪಾವತಿಸಿದೇ ತಪ್ಪಿಸಿಕೊಂಡಿದ್ದವರು ಪದುಚೇರಿಯಲ್ಲಿನ ನಿಖರ ದಾಖಲೆಗಳನ್ನು ಕೊಡಲಾಗದೇ ಪ್ರಾದೇಶಿಕ ಸಾರಿಗೆ ಇಲಾಖೆ ಮುಂದೆ ಮೊಣಕಾಳು ಉರಿದಿದ್ದಾರೆ. ಅನಿವಾರ್ಯವಾಗಿ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸ ತೊಡಗಿದ್ದಾರೆ.
ಕಲಬುರಗಿಯಲ್ಲಿ ಪದುಚೇರಿ ವಾಹನ ಸಂಖ್ಯೆ ಹೊಂದಿದ ಮಾಲೀಕರೊಬ್ಬರಿಗೆ ಗರಿಷ್ಠ ₹ 4.7 ಶುಲ್ಕ ವಸೂಲಿ ಮಾಡಿ ₹5 ಸಾವಿರ ದಂಡ ವಿಧಿಸಿದರೆ, ಇನ್ನೊಬ್ಬ ಮಾಲೀಕರಿಗೆ ₹3.41ಲಕ್ಷ ಹಾಗೂ ಮಹಿಳೆಯೊಬ್ಬರಿಂದ ₹ 1.61 ಲಕ್ಷ ತೆರಿಗೆ ವಸೂಲಿ ಮಾಡಿ ದಂಡವನ್ನೂ ವಿಧಿಸಲಾಗಿದೆ ಎಂದು ಕಲಬುರಗಿ ಪ್ರಾದೇಶಿಕ ಸಾರಿಗೆ ಇಲಾಖೆಯ ಇನ್‌ಸ್ಪೆಕ್ಟರ್ ತಿಳಿಸಿದರು.
‘ರಾಜ್ಯಕ್ಕೆ ತೆರಿಗೆ ವಂಚಿಸಿ ರಾಜ್ಯದಲ್ಲೇ ಸಂಚರಿಸುತ್ತಿರುವ ವಾಹನಗಳನ್ನು ಸೀಜ್ ಮಾಡುವಂತೆ ಹಾಗೂ ಅವರ ದಾಖಲೆಗಳನ್ನು ಪರಿಶೀಲಿಸಿ ತೆರಿಗೆ ಕಟ್ಟಿಸಿಕೊಳ್ಳುವಂತೆ ಇಲಾಖೆ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಹೀಗಾಗಿ ಕಾರ್ಯಾಚರಣೆ ಮುಂದುವರಿದಿದೆ’ ಎಂದು ರಾಯಚೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಮಿಲಿಂದಕುಮಾರ ಶ್ರೀಗಂಧಮೂರ್ತಿ ಹೇಳಿದರು.
‘ರಾಯಚೂರಲ್ಲಿ ವಶಪಡಿಸಿಕೊಳ್ಳಲಾದ ವಾಹನ ಮಾಲೀಕರ ದಾಖಲೆಗಳನ್ನು ಪರಿಶೀಲಿಸಿ ಶುಲ್ಕ ವಸೂಲಿ ಮಾಡಲಾಗಿದೆ. ದಾಖಲೆ ಕೊಡದವರಿಗೆ ನಿಯಮನಾಸುರ ಲೆಕ್ಕ ಹಾಕಿ ಬಾಕಿ ತೆರಿಗೆ ವಸೂಲಿ ಮಾಡುವ ಜತೆಗೆ ದಂಡವನ್ನೂ ವಿಧಿಸಲಾಗುತ್ತಿದೆ‘ ಎಂದು ವಿವರಿಸಿದರು.
ಪದುಚೇರಿಯಲ್ಲಿ ವಾಹನಗಳಿಗೆ ರಸ್ತೆ ತೆರಿಗೆ
ವಾಹನಗಳ ಮೌಲ್ಯ; ವಾರ್ಷಿಕ; ಅಜೀವ ತೆರಿಗೆ
₹ 15ಲಕ್ಷ ದಿಂದ ₹20 ಲಕ್ಷ; ₹7ಸಾವಿರ; ₹50 ಸಾವಿರ
₹20ಲಕ್ಷಕ್ಕೂ ಅಧಿಕ; ₹14 ಸಾವಿರ; ₹50 ಸಾವಿರ
ಕಾರು, ಜೀಪು; ವಾರ್ಷಿಕ;ಅಜೀವ ತೆರಿಗೆ
700 ಕೆ.ಜಿ ಒಳಗೆ;₹550;₹4,800
1,500 ಕೆ.ಜಿ ಒಳಗೆ;₹710;₹6000
2,000 ಕೆ.ಜಿ ಒಳಗೆ;₹910;₹8000
3,000 ಕೆ.ಜಿ ಒಳಗೆ;₹940;₹8000
3,000 ಕೆ.ಜಿಗೂ ಅಧಿಕ;₹960;₹8000
ರಾಜ್ಯದಲ್ಲಿ ಪದುಚೇರಿ ವಾಹನಗಳಿಗೆ ತೆರಿಗೆ
B-ನೋಂದಣಿಯಾಗಿದ್ದರೆ ವರ್ಷಕ್ಕೆ ಅನುಗುಣ;ಅಜೀವ ತೆರಿಗೆ
ಎರಡು ವರ್ಷದೊಳಗೆ;93%
2ರಿಂದ 3 ವರ್ಷದ ಒಳಗೆ;87%
3ರಿಂದ 4ವರ್ಷದ ಒಳಗೆ;81%
4ರಿಂದ 5 ವರ್ಷದ ಒಳಗೆ;75%
5ರಿಂದ 6 ವರ್ಷದ ಒಳಗೆ;69%
6ರಿಂದ 7 ವರ್ಷದ ಒಳಗೆ;64%
7ರಿಂದ 8 ವರ್ಷದ ಒಳಗೆ;59%
8ರಿಂದ 9 ವರ್ಷದ ಒಳಗೆ;54%
9ರಿಂದ 10 ವರ್ಷದ ಒಳಗೆ;49%
10ರಿಂದ 11 ವರ್ಷದ ಒಳಗೆ;45%
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.