ಮುದಗಲ್: ಪಟ್ಟಣದ ಕಿಲ್ಲಾದಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ಪುನರ್ ಪ್ರತಿಷ್ಠಾಪನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗುತು.
ಮಠದ ಆವರಣದಲ್ಲಿ ನಡೆದ ಸಮಾರಂಭವನ್ನು ನಾರಾಯಣರಾವ್ ದೇಶಪಾಂಡೆ ಉದ್ಘಾಟಿಸಿ, ಮಠದ ಇತಿಹಾಸ ಹಾಗೂ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ನರಸಿಂಗರಾವ್ ದೇಶಪಾಂಡೆ, ಬೆಂಗಳೂರಿನ ವಿದ್ವಾನ್ ವಿಜಯಸಿಂಹಾಚಾರ್ಯ ಮಾತನಾಡಿದರು.
ಕೃತಿ ಲೋಕಾರ್ಪಣೆ: ಕರ್ನಾಟಕ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ರಚಿಸಿದ ಹೊನ್ನ ಹೊತ್ತಿಗೆ ಕೃತಿ ಲೋಕಾರ್ಪಣೆ ಮಾಡಲಾಯಿತು.
ಡಾ.ಮಂಜುನಾಥ ಹಾಗೂ ವಿ.ರಮೇಶ ಅವರಿಂದ ವೇದೋಪನಿಷತ್ ಪಠಣ ನಡೆಯಿತು.
ಡಾ.ಗುರುರಾಜ ದೇಶಪಾಂಡೆ, ಅನಂತ ದೇಶಪಾಂಡೆ, ಶ್ರೀನಿವಾಸ ದೇಶಪಾಂಡೆ, ವೆಂಕಟೇಶ ಕುಲಕರ್ಣಿ, ಪ್ರಾಣೇಶ ಮುತಾಲಿಕ್, ಗುರುರಾಜ ದೇಶಪಾಂಡೆ, ಮಠದ ಅರ್ಚಕರಾದ ಮಧ್ವಾಚಾರ್ಯ ಜೋಷಿ, ಹೇಮಂತ ಜೋಷಿ, ಬಂಗಾಲಿ ಹರ್ಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.