ADVERTISEMENT

ತೆಲಂಗಾಣದಿಂದ ರಾಯಚೂರಿಗೆ ರೈಲಿನಲ್ಲಿ ಸಾಗಿಸುತ್ತಿದ್ದ 250 ಲೀ. ಸೇಂದಿ ವಶ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 7:25 IST
Last Updated 19 ಜನವರಿ 2025, 7:25 IST
<div class="paragraphs"><p>ಅಬಕಾರಿ ಇಲಾಖೆ ಹಾಗೂ ಆರ್‌ಪಿಎಫ್ ಅಧಿಕಾರಿಗಳ ತಂಡ ರಾಯಚೂರು ರೈಲು ನಿಲ್ದಾಣದಲ್ಲಿ ದಾಳಿ ನಡೆಸಿ ಸಿ.ಎಚ್ ಪೌಡರ್ ಮಿಶ್ರಿತ 250 ಲೀಟರ್ ಸೇಂದಿ ವಶಪಡಿಸಿಕೊಂಡರು</p></div>

ಅಬಕಾರಿ ಇಲಾಖೆ ಹಾಗೂ ಆರ್‌ಪಿಎಫ್ ಅಧಿಕಾರಿಗಳ ತಂಡ ರಾಯಚೂರು ರೈಲು ನಿಲ್ದಾಣದಲ್ಲಿ ದಾಳಿ ನಡೆಸಿ ಸಿ.ಎಚ್ ಪೌಡರ್ ಮಿಶ್ರಿತ 250 ಲೀಟರ್ ಸೇಂದಿ ವಶಪಡಿಸಿಕೊಂಡರು

   

ರಾಯಚೂರು: ತೆಲಂಗಾಣದಿಂದ ರಾಯಚೂರಿಗೆ ರೈಲಿನ ಮೂಲಕ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸಿ.ಎಚ್ ಪೌಡರ್ ಮಿಶ್ರಿತ 250 ಲೀಟರ್ ಸೇಂದಿಯನ್ನು ಭಾನುವಾರ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಹಾಗೂ ಆರ್‌ಪಿಎಫ್ ಅಧಿಕಾರಿಗಳ ತಂಡದೊಂದಿಗೆ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಸಿಎಚ್ ಪೌಡರ್ ಮಿಶ್ರಿತ ಸೇಂದಿಯನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಕ್ಲೋರಲ್ ಹೈಡೇಡ್ ವಿಷಪೂರಿತ ರಾಸಾಯನಿಕ ಮಿಶ್ರಣ ಮಾಡಿ ಕಲಬೆರಿಕೆ ಸೇಂದಿಯನ್ನು ಮಾರಾಟಕ್ಕೆ ತಯಾರಿಸಿಕೊಂಡು ತೆಲಂಗಾಣದ ಕೃಷ್ಣ ಗ್ರಾಮದ ರೈಲ್ವೆ ನಿಲ್ದಾಣ ಮೂಲಕ ಆಗಮಿಸಿ ರಾಯಚೂರು ರೈಲ್ವೆ ನಿಲ್ದಾಣದಿಂದ ನಗರದ ವಿವಿಧ ಬಡಾವಣೆಯಲ್ಲಿ ಮಾರಾಟ ಮಾಡುತ್ತಿರುವು ಮಾಹಿತಿ ಬಂದಿತ್ತು.

ಅಧಿಕಾರಿಗಳು ದಾಳಿ ನಡೆಸಿ ಸೇಂದಿ ವಶಪಡಿಸಿಕೊಂಡು ನಾಶ ಪಡಿಸಿದರು. ದಾಳಿಯಲ್ಲಿ

ಅಬಕಾರಿ ಉಪ ಆಯುಕ್ತ, ಅಧೀಕ್ಷಕ, ನಿರೀಕ್ಷಕ, ಉಪ ನಿರೀಕ್ಷಕ, ರಾಯಚೂರು ವಿಭಾಗ ಹಾಗೂ ವಲಯ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.