ADVERTISEMENT

ರಾಯಚೂರು: ಏಮ್ಸ್‌ ಹೋರಾಟ 1300 ನೇ ದಿನಕ್ಕೆ ಪದಾರ್ಪಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:50 IST
Last Updated 3 ಡಿಸೆಂಬರ್ 2025, 6:50 IST
ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕು ಎಂದು ಒತ್ತಾಯಿಸಿ ಹೋರಾಟ ಸಮಿತಿ ಸದಸ್ಯರು ನಗರದಲ್ಲಿ ಮಂಗಳವಾರ ಧರಣಿ ನಡೆಸಿದರು
ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕು ಎಂದು ಒತ್ತಾಯಿಸಿ ಹೋರಾಟ ಸಮಿತಿ ಸದಸ್ಯರು ನಗರದಲ್ಲಿ ಮಂಗಳವಾರ ಧರಣಿ ನಡೆಸಿದರು    

ರಾಯಚೂರು: ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ 1300 ನೇ ದಿನಕ್ಕೆ ಪದಾರ್ಪಣೆ ಮಾಡಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಪ್ರಧಾನ ಮಂತ್ರಿಗೆ ಹಲವು ಶಿಫಾರಸು ಪತ್ರಗಳನ್ನು ಬರೆದು ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ. ಪ್ರಧಾನಮಂತ್ರಿ ಅವರು ರಾಜ ಸರ್ಕಾರದ ಶಿಫಾರಸು ಪತ್ರ ಹಾಗೂ ಸುಧೀರ್ಘ ಹೋರಾಟಕ್ಕೂ ಸ್ಪಂದಿಸುತ್ತಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಮಂಗಳವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಬಸವರಾಜ್ ಕಳಸ, ಅಶೋಕಕುಮಾರ ಜೈನ್, ಹೇಮರಾಜ್ ಅಸ್ಕಿಹಾಳ್, ಶ್ರೀನಿವಾಸ ನಾಗಲದಿನ್ನಿ, ಆರಿಫ್ ಮಿಯಾ ನೆಲಹಾಳ, ಜಗದೀಶ್ ಪೂರತಿಪ್ಲಿ, ಎಸ್. ಹನುಮಂತಪ್ಪ, ಸಾಧಿಖಾನ್ ಯರಿಗೇರಾ ,ತಾಯಣ್ಣ ಗದಾರ್ ,ಬಾಬು ಮೇಧ, ವೆಂಕಟರೆಡ್ಡಿ, ಜೈ ಭೀಮ್ ವಲ್ಲಭ, ಮಹೇಂದ್ರ ಸಿಂಗ್, ನರಸಿಂಹಲು ಮರ್ಚೆಟ್ಟಲ್, ಲಕ್ಷ್ಮಣ ಕಲ್ಲೂರ, ಉಮಾಪತಿ, ಆಕಾಶ್ ಮಾನ್ವಿ, ಉರುಕುಂದ ಸಿಯ ತಲಾಬ್, ಮಲ್ಲಿಕಾರ್ಜುನ ಎತ್ತಿನ ಮಾಳಗಿ, ವೀರಭದ್ರಯ್ಯ ಸ್ವಾಮಿ, ಬಸವರಾಜ್ ಮಿಮಿಕ್ರಿ, ಗುರುರಾಜ ಕುಲಕರಣಿ, ಅಜೀಜ್,ವೆಂಕಯ್ಯ ಶೆಟ್ಟಿ ಹೊಸಪೇಟೆ, ಮಹಮ್ಮದ್ ಇಸಾಕ್, ದೇವೇಂದ್ರಪ್ಪ ಧನ್ವಂತರಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.