
ರಾಯಚೂರು: ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಹುತಾತ್ಮರ ದಿನ ಆಚರಿಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಶಾಂತಪ್ಪ ಮಾತನಾಡಿ, ‘ಗಾಂಧೀಜಿಯವರ ಸರಳತೆ, ಸೌಜನ್ಯತೆ ಹಾಗೂ ಅವರ ಅಹಿಂಸಾತ್ಮಕ ಗುಣಗಳೇ ಅವರನ್ನು ಮಹಾತ್ಮ ಎಂದು ಕರೆಯುವಂತೆ ಮಾಡಿದೆ. ಹಿಂದಿಗಿಂತಲೂ ಇಂದು ಗಾಂಧೀಜಿ ಅವರ ತತ್ವ, ಆದರ್ಶಗಳನ್ನು ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ’ ಎಂದು ಹೇಳಿದರು.
ಇದಕ್ಕೂ ಮೊದಲು ಪಕ್ಷದ ಮುಖಂಡರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಖಜಾಂಚಿ ಜಯವಂತರಾವ್ ಪತಂಗೆ, ಕೆಪಿಸಿಸಿ ಎಸ್.ಟಿ. ಘಟಕದ ಉಪಾಧ್ಯಕ್ಷ ತಾಯಣ್ಣ ನಾಯಕ, ಮಹ್ಮದ್ ಶಾಲಂ, ಎನ್.ಶ್ರೀನಿವಾಸರೆಡ್ಡಿ, ಆಂಜನೇಯ ಕುರುಬದೊಡ್ಡಿ, ಶ್ರೀದೇವಿ ನಾಯಕ, ಭೀಮನಗೌಡ ನಾಗಡದಿನ್ನಿ, ಸುಧಾಮ, ಜೆ.ಮಾರೆಪ್ಪ, ಕೆ.ಇ.ಕುಮಾರ, ಜೆ.ಅಂಜನಕುಮಾರ, ಜೆ.ತಿಮ್ಮಪ್ಪ, ಯುಸೂಫ್ ಖಾನ್, ಶಂಕರ ಕಲ್ಲೂರು, ಸೈಯದ್ ದಸ್ತಗಿರಿ, ಮರಿಸ್ವಾಮಿ ಗಟ್ಟುಬಿಚ್ಚಾಲಿ, ಉರುಕುಂದಪ್ಪ, ಕಡಗೋಳ ಚೇತನಕುಮಾರ, ವಿಶ್ವನಾಥ ಪಟ್ಟಿ, ಜಾಫರ್ ಅಹ್ಮದ್, ಶಾಮಸುಂದರ, ಶಂಕರ ಹೊಸೂರು, ಮಹ್ಮದ್ ಶಹಬಾಜ್, ಕೆ.ರಘು ಮಡಿವಾಳ, ಪರಶುರಾಮುಲು, ಸುರೇಶ ಪಟ್ಟಿ, ಜಿ.ಮುದ್ದುಕೃಷ್ಣ ಮಂಚಾಲ, ಇಲ್ಲೂರು ಗೋಪಾಲಯ್ಯ, ಎಂ.ಆರ್.ದತ್ತಾತ್ರೇಯ, ರಾಘವೇಂದ್ರ, ಅಮರೇಶ ಭಂಡಾರಿ, ಶಶಿಕಲಾ ಭೀಮರಾಯ, ಮಾಲಾ ಭಜಂತ್ರಿ, ನಾಗರತ್ನ, ಬಿ.ಉಮಾ, ಶಾಬಾನ, ಈರಮ್ಮ, ಲಕ್ಷ್ಮೀ, ವಿಜಯಕುಮಾರ, ನೆಲಹಾಳ ಗಿರಿಯಪ್ಪ, ರಘು ಕೇಶವಮೂರ್ತಿ, ವಿಜಯಪ್ರಸಾದ, ಅದ್ನಾನ್, ವಾಹಿದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.