ರಾಯಚೂರು: ನಗರದ ಹೈದರಾಬಾದ್ ರಸ್ತೆಯಲ್ಲಿ ರಸ್ತೆಯ ಅಂಚಿನಲ್ಲಿ ಯಂತ್ರದ ನೆರವಿನಿಂದ ಬಿಳಿಯ ಬಣ್ಣದ ಪಟ್ಟೆ ಎಳೆಯುತ್ತಿದ್ದ ಲಾರಿಯಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿತು.
ಹೈದರಾಬಾದ್ ರಸ್ತೆಯಲ್ಲಿ ರಸ್ತೆಯ ಎರಡು ಬದಿಗೆ ಬಿಳಿಯ ಬಣ್ಣ ಬಳಿಯಲಾಗುತ್ತಿತ್ತು. ಯಂತ್ರ ಇಟ್ಟಿದ್ದ ಲಾರಿಯಲ್ಲಿ 10 ಸಿಲಿಂಡರ್‌ಗಳು ಇದ್ದವು. ಇದರಲ್ಲಿನ ಒಂದು ಸಿಲಿಂಡರ್‌ನಿಂದ ಅನಿಲ ಹೊರಗೆ ಬರಲು ಆರಂಭಿಸಿ ಬೆಂಕಿ ಹೊತ್ತಿಕೊಂಡಿತು.
ಕಾರ್ಮಿಕರು ತಕ್ಷಣ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಭಾರಿ ಅನಾಹುತ ತಪ್ಪಿಸಿದರು.
ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆ.ನರಸಪ್ಪ , ರಂಗಪ್ಪ , ಬಸವರಾಜ್ , ಸಾಬಣ್ಣ , ನಾಸೀರ್ , ಮಲ್ಲಿಕಾರ್ಜುನ ಬೆಂಕಿ ನಂದಿಸುವಲ್ಲಿ ನೆರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.