ADVERTISEMENT

ರಾಯಚೂರು ಜಿಲ್ಲೆಯಲ್ಲಿ ಮುಂದುವರಿದ ಜಿಟಿ ಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 13:46 IST
Last Updated 20 ಜುಲೈ 2024, 13:46 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಯಚೂರು: ರಾಯಚೂರು ನಗರ, ಗ್ರಾಮೀಣ, ಸಿಂಧನೂರು, ದೇವದುರ್ಗ, ಮಾನ್ವಿ, ಸಿರವಾರ, ಕವಿತಾಳ, ತುರ್ವಿಹಾಳ ಹಾಗೂ ಹಟ್ಟಿ ಚಿನ್ನದಗಣಿ ಪ್ರದೇಶದಲ್ಲಿ ಶನಿವಾರ ಜಿಟಿ ಜಿಟಿ ಮಳೆಯಾಗಿದೆ.

ಜಿಲ್ಲೆಯ ವಿವಿಧೆಡೆ ಬೆಳಗಿನ ಜಾವ ಸಾಧಾರಣ ಮಳೆ ಸುರಿದಿದೆ. ಬೆಳಿಗ್ಗೆಯಿಂದಲೇ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿತ್ತು. ದಿನವಿಡೀ ಸೂರ್ಯನ ದರ್ಶನವಾಗಲಿಲ್ಲ. ಜಿಟಿ ಜಿಟಿ ಮಳೆಗೆ ಮಾರುಕಟ್ಟೆ ಪ್ರದೇಶ ಕೆಸರುಮಯವಾಗಿತ್ತು. ಬಡವಾಣೆಗಳಲ್ಲಿ ಡಾಂಬರು ಮಾಡದ ಕಚ್ಚಾ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿವೆ.

ADVERTISEMENT

ರಾಯಚೂರಲ್ಲಿ 14.9 ಮಿ.ಮೀ, ಮಾನ್ವಿಯಲ್ಲಿ 9.6 ಮಿ.ಮೀ, ದೇವದುರ್ಗದಲ್ಲಿ 5.2 ಮಿ.ಮೀ, ಸಿರವಾರದಲ್ಲಿ 4.2 ಮಿ.ಮೀ, ಮಸ್ಕಿಯಲ್ಲಿ 2.7 ಮಿ.ಮೀ ಹಾಗೂ ಸಿಂಧನೂರಿನಲ್ಲಿ 2.1 ಮಿ.ಮೀ ಮಳೆಯಾಗಿದೆ.

ಜಿಲ್ಲೆಯಲ್ಲಿ ಭಾನುವಾರ ಹಾಗೂ ಸೋಮವಾರವೂ ಜಿಟಿ ಜಿಟಿ ಮಳೆ ಮುಂದುವರಿಯಲಿದೆ. ದೇವದುರ್ಗ ಹಾಗೂ ಮಸ್ಕಿಯಲ್ಲಿ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.