ADVERTISEMENT

ಧಾರಾಕಾರ ಮಳೆ: ತುಂಬಿ ಹರಿದ ಹಳ್ಳ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 12:24 IST
Last Updated 19 ಜೂನ್ 2022, 12:24 IST
ಕವಿತಾಳ ಸಮೀಪದ ಚಿಲ್ಕರಾಗಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು ಕೂಲಿ ಕಾರ್ಮಿಕರು ಭಾನುವಾರ ಹಳ್ಳ ದಾಟಲು ಪರದಾಡಿದರು
ಕವಿತಾಳ ಸಮೀಪದ ಚಿಲ್ಕರಾಗಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು ಕೂಲಿ ಕಾರ್ಮಿಕರು ಭಾನುವಾರ ಹಳ್ಳ ದಾಟಲು ಪರದಾಡಿದರು   

ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ಇಡೀ ರಾತ್ರಿ ಧಾರಾಕಾರವಾಗಿ ಮಳೆ ಸುರಿಯಿತು.

ರಭಸದ ಮಳೆಗೆ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲ್ಕರಾಗಿ ಹಳ್ಳ ತುಂಬಿ ಹರಿದ ಪರಿಣಾಮ ಸಂಚಾರಕ್ಕೆ ತೊಂದರೆ ಉಂಟಾಯಿತು.

ಚಿಲ್ಕರಾಗಿ ಗ್ರಾಮಕ್ಕೆ ಉದ್ಯೋಗ ಖಾತ್ರಿ ಕೆಲಸ ಮಾಡಲು ಹೋಗುವ ಆನಂದಗಲ್‍ ಗ್ರಾಮದ ಕೂಲಿ ಕಾರ್ಮಿಕರು ಹಳ್ಳ ದಾಟಲು ಪರದಾಡಿದರು. ಖಾತ್ರಿ ಕೆಲಸ ಮಾಡುವವರಲ್ಲಿ ಮಹಿಳೆಯರಿದ್ದು ಅವರಿಗೆ ಹಳ್ಳ ದಾಟಲು ತೊಂದರೆಯಾಗುತ್ತಿದೆ. ಹೀಗಾಗಿ ಆನಂದಗಲ್‍ ಗ್ರಾಮದಲ್ಲಿ ಕೆಲಸ ನೀಡುವಂತೆ ಕೂಲಿ ಕಾರ್ಮಿಕರು ಒತ್ತಾಯಿಸಿದರು.

ADVERTISEMENT

ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಅಧಿಕಾರಿ ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಿದ್ದು ಆನಂದಗಲ್‍ ಗ್ರಾಮದಲ್ಲಿ ಕೆಲಸ ನೀಡುವ ಭರವಸೆ ನೀಡಿದ್ದಾರೆ ಎಂದು ಗ್ರಾಮದ ಮುಖಂಡರೊಬ್ಬರು ಹೇಳಿದರು. ಈ ಬಗ್ಗೆ ಮಾಹಿತಿ ಪಡೆಯಲು ಸಂಬಂಧಿಸಿದ ಪಿಡಿಒ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಅವರ, ಮೊಬೈಲ್‍ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.