ADVERTISEMENT

ರಾಮಮಂದಿರ ಒಂದು ಧರ್ಮಕ್ಕೆ ಸಿಮೀತವಲ್ಲ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 16:52 IST
Last Updated 14 ನವೆಂಬರ್ 2019, 16:52 IST
ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ
ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ   

ರಾಯಚೂರು: ಎಲ್ಲ ಮಂದಿರಗಳು ಒಂದೇ ಧರ್ಮಕ್ಕೆ ಹಾಗೂ ಸಮಾಜಕ್ಕೆ ಸೀಮಿತವಿಲ್ಲ ಎಂದು ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಗುರುವಾರ ಸುದ್ದಿಗಾರರೊಂದಿಗೆ ಮಾತನಡಿದರು.

ಸುಪ್ರೀಂಕೋರ್ಟ್ ನೀಡಿದ ಅಯೋಧ್ಯೆ ತೀರ್ಪು ರಾಷ್ಟ್ರದ ಸಾಮರಸ್ಯಕ್ಕೆ ನಾಂದಿಯಾಗಿದೆ. ಮಸೀದಿ ನಿರ್ಮಾಣಕ್ಕೆ ನೀಡಿರುವ ಜಾಗದ ಬಗ್ಗೆ ಕೆಲವರು ವಿರೋಧಿಸಬಹುದು. ಮಂದಿರಗಳಿಗೆ ಎಲ್ಲ ಧರ್ಮಿಯರು ಪ್ರವೇಶಿಸಬೇಕು. ಮಂದಿರಗಳೆಲ್ಲ ರಾಷ್ಟ್ರಮಂದಿರಗಳು ಎಂದು ವಿಶ್ಲೇಷಿಸಿದರು.

ADVERTISEMENT

ರಾಮಮಂದಿರ ಒಂದು ವರ್ಷದೊಳಗಾಗಿ ಪೂರ್ಣಗೊಳ್ಳಬೇಕು. ಕೋರ್ಟ್ ಆದೇಶದಂತೆ ಮೂರು ತಿಂಗಳಲ್ಲಿ ಟ್ರಸ್ಟ್ ರಚಿಸಬೇಕು ಎಂದು ಹೇಳಿದರು.

ಶಬರಿಮಲೆಗೆ ಸಂಬಂಧಿಸಿದ ವಿಚಾರವೂ ಸೂಕ್ಷ್ಮತೆಯಿಂದ ಕೂಡಿದೆ. ಒಂದು ಕಡೆ ಸಾಂಪ್ರದಾಯ ಮತ್ತೊಂದು ಕಡೆ ಮಹಿಳೆಯರ ಹಕ್ಕಿನ ವಿಚಾರವೂ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.