ADVERTISEMENT

ರಾಯರ ಆರಾಧನಾ ಮಹೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 15:17 IST
Last Updated 21 ಆಗಸ್ಟ್ 2021, 15:17 IST
ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವದ ಮೊದಲ ದಿನ ಶನಿವಾರ, ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಗೋಪೂಜೆ ನೆರವೇರಿಸಿದರು
ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವದ ಮೊದಲ ದಿನ ಶನಿವಾರ, ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಗೋಪೂಜೆ ನೆರವೇರಿಸಿದರು   

ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವದ ನಿಮಿತ್ತ ಮಠದ ಪೀಠಾಧಿಪತಿ ಸುಬುಧೇಂಧ್ರ ತೀರ್ಥರು, ಮಠದ ಮುಂಭಾಗ ಶನಿವಾರ ಧ್ವಜಾರೋಹಣ ನೆರವೇರಿಸಿ ಒಂದುವಾರ ನಡೆಯುವ ಸಪ್ತರಾತ್ರೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಮಠದಲ್ಲಿ ಪೂರ್ಣಕುಂಭ, ವಾದ್ಯಮೇಳಗಳು, ಮಂತ್ರಘೋಷಗಳು ಮೊಳಗಿದವು. ಶ್ರೀಕಾರಹಾಕಿದ ನಂತರ ಶ್ರೀಮಠದ ಆವರಣದಲ್ಲಿ ಧ್ವಜಾರೋಹಣ, ಗೋವು, ಅಶ್ವ,ಗಜ, ಲಕ್ಷ್ಮೀ ಹಾಗೂ ಧಾನ್ಯ ಪೂಜೆಗಳನ್ನು ಸ್ವಾಮೀಜಿ ನೆರವೇರಿಸಿದರು.

ಪ್ರತಿನಿತ್ಯ ಬೆಳಗಿನ ಜಾವ ರಾಯರ ಮೂಲ ವೃಂದಾವನದ ನೈರ್ಮಲ್ಯ ವಿಸರ್ಜನೆ, ವಿಶೇಷ ಪೂಜೆಗಳು, ಮಹಾಸಂಸ್ಥಾನ ಪ್ರತಿಮೆಗಳ ಪೂಜೆ, ಪಂಚಾಭಿಷೇಕ, ಪ್ರಾಕಾರ ರಥೋತ್ಸವ ನಡೆಯಲಿವೆ.

ADVERTISEMENT

ಆಗಸ್ಟ್‌ 23 ರಂದು ಪೂರ್ವರಾಧನೆ, 24 ರಂದು ಮಧ್ಯಾರಾಧನೆ ಹಾಗೂ 25 ರಂದು ಉತ್ತಾರಾಧನೆ ನಡೆಯುವುದು. ‌ಕೋವಿಡ್‌ ನಿಯಮ ಅನುಸರಿಸಿಕೊಂಡು ಭಕ್ತರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.