ADVERTISEMENT

ಮಸ್ಕಿ | ಬಾಡಿಗೆ ಕಟ್ಟಡದಲ್ಲಿ ಸಮಸ್ಯೆಗಳ ವಸತಿ

ಪ್ರಕಾಶ ಮಸ್ಕಿ
Published 20 ಡಿಸೆಂಬರ್ 2023, 6:03 IST
Last Updated 20 ಡಿಸೆಂಬರ್ 2023, 6:03 IST
<div class="paragraphs"><p>ವಸತಿ ಶಾಲೆ ದುರವಸ್ಥೆ (ಪ್ರಾತಿನಿಧಿಕ ಚಿತ್ರ)</p></div>

ವಸತಿ ಶಾಲೆ ದುರವಸ್ಥೆ (ಪ್ರಾತಿನಿಧಿಕ ಚಿತ್ರ)

   

ಮಸ್ಕಿ: ಇಲ್ಲಿ ಖಾಸಗಿ ಕಟ್ಟಡವೇ ಸೂರು, ನೆಲದಲ್ಲಿಯೇ ಕುಳಿತು ಪಾಠ ಕೇಳುವ ಪರಿಸ್ಥಿತಿ, ಕಾಟ್‌ ವ್ಯವಸ್ಥೆಯೂ ಇಲ್ಲ... 

ಇದು ಮಸ್ಕಿಯಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ಥಿತಿ.

ADVERTISEMENT

2007ರಲ್ಲಿ ಆರಂಭವಾದ ಈ ಶಾಲೆಗೆ 17 ವರ್ಷಗಳು ಸಂದಿವೆ. ಸ್ವಂತ ಕಟ್ಟಡ ಇಲ್ಲ. ಪ್ರಾರಂಭದಲ್ಲಿ ಎಪಿಎಂಸಿ ಕಟ್ಟಡದಲ್ಲಿ ಆರಂಭವಾದ ಶಾಲೆ ನಂತರ ಖಾಸಗಿ ವ್ಯಕ್ತಿಯೊಬ್ಬರ ಮಿಲ್ ಹಾಗೂ ಅಲ್ಲಿಂದ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರವಾಯಿತು. ಕೆಲ ದಿನಗಳಲ್ಲಿಯೇ ಗ್ರಿನ್ ಸಿಟಿಯಲ್ಲಿನ ಖಾಸಗಿ ವ್ಯಕ್ತಿಯೊಬ್ಬರ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ಈ ಶಾಲೆಯ ವಿದ್ಯಾರ್ಥಿಗಳು ಕಟ್ಟಡದಿಂದ ಕಟ್ಟಡಕ್ಕೆ ಅಲೆದಾಡಬೇಕಾಗಿದೆ.

250 ವಿದ್ಯಾರ್ಥಿಗಳಿರುವ ಈ ವಸತಿ ಶಾಲೆಯಲ್ಲಿ 125 ಬಾಲಕರು ಹಾಗೂ 125 ಬಾಲಕಿಯರ ಹಾಜರಾತಿ ಇದೆ.

ಕಂದಾಯ ಇಲಾಖೆ ಮುದಗಲ್ ರಸ್ತೆಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ 5 ಎಕರೆ ಜಾಗ ನೀಡಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡದ ಕಾರಣ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ಬಾಡಿಗೆ ನೀಡಿ ಖಾಸಗಿ ಕಟ್ಟಡದಲ್ಲಿ ಶಾಲೆ ನಡೆಸಬೇಕಾದ ಸ್ಥಿತಿ ಇದೆ.

ಈ ವಸತಿ ಶಾಲೆಗೆ ಸ್ವಂತ ಕಟ್ಟಡ ಇಲ್ಲ ಎನ್ನುವ ಕಾರಣಕ್ಕೆ ಸರ್ಕಾರದಿಂದ ದೊರೆಯುವ ಕಾಟ್ ಹಾಗೂ ಬೆಂಚ್ ಸೇರಿದಂತೆ ಇತರ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ವಾಸದ ಕೊಠಡಿಯೇ ಪಾಠ ಶಾಲೆಯಾಗಿ ಮಾರ್ಪಟ್ಟಿದೆ. ನೆಲದ ಮೇಲೆ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.

ಅನುದಾನದಲ್ಲಿ ತಾರತಮ್ಯ ಆರೋಪ

ಜಿಲ್ಲೆಯ ವಿವಿಧೆಡೆ ಇರುವ ವಸತಿ ಶಾಲೆಗಳ ಕಟ್ಟಡ ನಿರ್ಮಿಸಲು ಸರ್ಕಾರ ಪ್ರಸಕ್ತ ವರ್ಷ ₹22 ಕೋಟಿ ಅನುದಾನ ನೀಡಿದೆ. ಆದರೆ, ಮಸ್ಕಿ ವಸತಿ ಶಾಲೆಗೆ ಮಾತ್ರ ₹9 ಕೋಟಿ ಅನುದಾನ ನೀಡುವ ಮೂಲಕ ಆಡಳಿತ ಪಕ್ಷದ ಶಾಸಕರಿರುವ ಕ್ಷೇತ್ರಕ್ಕೆ ಮಲತಾಯಿ ಧೋರಣೆ ಮಾಡಿದೆ ಎಂದು ಜನ ಆರೋಪಿಸುತ್ತಾರೆ.

‘ಮಸ್ಕಿಯಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 5 ಎಕರೆ ಜಾಗ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರ ₹9 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಹೆಚ್ಚಿನ ಅನುದಾನ ನೀಡುವಂತೆ ಸಂಬಂಧಿಸಿದ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದ್ದಾರೆ.

ಮಸ್ಕಿಯ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.