ADVERTISEMENT

ರಿಮ್ಸ್ ಆವರಣದ ಮುಂದೆ ವೈದ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 14:43 IST
Last Updated 29 ನವೆಂಬರ್ 2021, 14:43 IST
ಕರ್ನಾಟಕ ಅಸೋಷಿಯೇಶನ್ ಆಫ್ ರೆಸಿಡೆಂಟ್‌ ಡಾಕ್ಟರ್ಸ್ ವತಿಯಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಯ ಆವರಣದ ಮುಂದೆ ಸೋಮವಾರ ಯುವ ವೈದ್ಯರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಅಸೋಷಿಯೇಶನ್ ಆಫ್ ರೆಸಿಡೆಂಟ್‌ ಡಾಕ್ಟರ್ಸ್ ವತಿಯಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಯ ಆವರಣದ ಮುಂದೆ ಸೋಮವಾರ ಯುವ ವೈದ್ಯರು ಪ್ರತಿಭಟನೆ ನಡೆಸಿದರು.   

ರಾಯಚೂರು: ಕೋವಿಡ್ ವೇಳೆ ಕಾರ್ಯನಿರ್ವಹಿಸಿದ ವೈದ್ಯರಿಗೆ, ಸ್ನಾತಕೋತ್ತರ ಪದವಿಧರರಿಗೆ ಹಾಗೂ ಇಂಟರ್ನಿಗಳಿಗೆ ಭತ್ಯೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಅಸೋಷಿಯೇಶನ್ ಆಫ್ ರೆಸಿಡೆಂಡ್‌ ಡಾಕ್ಟರ್ಸ್ ವತಿಯಿಂದ ರಿಮ್ಸ್ ಆಸ್ಪತ್ರೆಯ ಆವರಣದ ಮುಂದೆ ಸೋಮವಾರ ಯುವ ವೈದ್ಯರು ಪ್ರತಿಭಟನೆ ನಡೆಸಿದರು.

ಒಂದು ವರ್ಷದಿಂದ ರಾಜ್ಯದಾದ್ಯಂತ ಆರೋಗ್ಯ ರಕ್ಷಣಾ ಕಾರ್ಯಕರ್ತರು ಕೋವಿಡ್ ವಿರುದ್ಧ ಕೆಲಸ ಮಾಡಿದ್ದಾರೆ. ಇವರ ಕಾರ್ಯವನ್ನು ಗುರುತಿಸಿ ಸರ್ಕಾರ ಕೊರೊನಾ ವಾರಿಯರ್ಸ್ ಎಂದು ವೈಭವೀಕರಿಸಲಾಗಿದೆ. ಎಲ್ಲಾ ವೈದ್ಯರಿಗೆ ಏಪ್ರಿಲ್ ತಿಂಗಳಿನಿಂದ ತಿಂಗಳಿಗೆ ₹10 ಸಾವಿರ ಕೋವಿಡ್ ಭತ್ಯೆ ಘೋಷಿಸಿದೆ. ಆದರೆ 6 ತಿಂಗಳು ಕಳೆದರೂ ವೈದ್ಯರಿಗೆ ಭತ್ಯೆ ನೀಡಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಡಾ.ನಮ್ರತಾ, ಡಾ. ತೇಜಸ್, ಡಾ.ರಮೇಶ ಎಸ್ಎಂ, ಡಾ.ವಿಜಯ ಕುಮಾರ, ಡಾ.ನಿಖಿಲ್, ಡಾ.ಸಚಿನ್ ಹಳ್ಳಿ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.