
ಮುದಗಲ್: ಸಮೀಪದ ನಾಗಲಾಪುರು ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್, ಬೀರಲಿಂಗೇಶ್ವರ ದೇವಸ್ಥಾನ ಹಾಗೂ ಖಾಸಗಿ ವ್ಯಕ್ತಿಗಳ ಹೊಲಕ್ಕೆ ಹೋಗುವ ರಸ್ತೆಯನ್ನು ವ್ಯಕ್ತಿ ಒಬ್ಬ ಬಂದ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಾಗಲಾಪುರು ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗೆ ಹೋಗಲು ಇದ್ದ ರಸ್ತೆಯನ್ನು ಆರು ತಿಂಗಳಿಂದ ವ್ಯಕ್ತಿಯೊಬ್ಬರು ತಡೆ ಗೋಡೆ ಕಟ್ಟಿ ಬಂದ್ ಮಾಡಿದ್ದರು. ಹೊಲಗಳಿಗೆ, ಕುಡಿಯುವ ನೀರಿನ ಟ್ಯಾಂಕ್, ದೇವಸ್ಥಾನಕ್ಕೆ ಹೋಗಲು ತೊಂದರೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದೂರು ನೀಡಿದ್ದರು.
ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅಧಿಕಾರಿಗಳ ತಂಡ ಭೇಟಿ ನೀಡಿ ಸಾರ್ವಜನಿಕರ ಜತೆ ಮಾತುಕತೆ ನಡೆಸಿ ಎರಡು ಕಡೆ ಸಂಧಾನ ಮಾಡಲು ಪ್ರಯತ್ನಿಸಿದರು. ಪಟ್ಟಣದ ಪ್ರವಾಸಿ ಮಂದಿರಕ್ಕೆ ಜಮೀನಿನ ಮಾಲೀಕರನ್ನು ಕರೆಸಿ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿದರು.
ಲಿಂಗಸುಗೂರು ತಹಶೀಲ್ದಾರ್ ಡಾ. ಮಲ್ಲಪ್ಪ, ಲಿಂಗಸುಗೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ, ಉಪ ತಹಶೀಲ್ದಾರ್ ತುಳಜಾರಾಮ ಸಿಂಗ್, ಪಿಎಸ್ಐ ಸದ್ದಾಂ ಹುಸೇನ್, ಗ್ರಾಮಲೆಕ್ಕಾಧಿಕಾರಿ ಮಾಬೂಸಾಬ ಹಲ್ಕಾವಟಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜ್ಯೋತಿಬಾಯಿ ಸೇರಿದಂತೆ ನಾಗಲಾಪುರು ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.