ADVERTISEMENT

ಉಕ್ರೇನ್‌ನಲ್ಲಿ ಸಿಲುಕಿದ ಹಟ್ಟಿ ಚಿನ್ನದ ಗಣಿ ವಿದ್ಯಾರ್ಥಿನಿ: ಆತಂಕ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 11:31 IST
Last Updated 26 ಫೆಬ್ರುವರಿ 2022, 11:31 IST
ರುಬಿನಾ ಹುಸೇನ್‌ ಬಾಷಾ
ರುಬಿನಾ ಹುಸೇನ್‌ ಬಾಷಾ   

ಹಟ್ಟಿ ಚಿನ್ನದ ಗಣಿ: ಪಟ್ಟಣದ ರುಬಿನಾ ಹುಸೇನ್‌ ಬಾಷಾ ಅವರು ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ.

ರುಬಿನಾ ಅವರು ಎಂಬಿಬಿಎಸ್ ಮೊದಲ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಯುದ್ಧ ಘೋಷಣೆಯಾದ ಬಳಿಕ ಪಾಲಕರು ತಮ್ಮ ಮಗಳನ್ನು ದೂರವಾಣಿಯಲ್ಲಿ ಸಂರ್ಪಕಿಸಿ ಯೋಗಕ್ಷೇಮ ವಿಚಾರಿಸಿ ಸ್ವದೇಶಕ್ಕೆ ಕರೆಸಿಕೊಳ್ಳುವ ಪ್ರಯತ್ನ ನಡೆಸಿದ್ದರು.

ಇದೀಗ ಯುದ್ಧ ನಡೆಯುತ್ತಿರುವ ಕಾರಣ ಅವರ ಕುಟುಂಬ ವರ್ಗದಲ್ಲಿ ಆತಂಕ ಮನೆ ಮಾಡಿದೆ.

ADVERTISEMENT

‘ಪುತ್ರಿಯನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಬೇಕು’ ಎಂದು ಪಾಲಕರು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.