ADVERTISEMENT

ನಾಗಮೋಹನ್ ದಾಸ್ ವರದಿ ಜಾರಿಗೆ ಆಗ್ರಹ

ಪ್ರಸನ್ನಾನಂದ ಸ್ವಾಮೀಜಿ ಧರಣಿಗೆ ಬೆಂಬಲ: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:38 IST
Last Updated 22 ಮೇ 2022, 2:38 IST
ಸಿರವಾರದಲ್ಲಿ ಪರಿಶಿಷ್ಟ ಮುಖಂಡರು ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಅವರಿಗೆ ಮನವಿ ಸಲ್ಲಿಸಿದರು
ಸಿರವಾರದಲ್ಲಿ ಪರಿಶಿಷ್ಟ ಮುಖಂಡರು ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಅವರಿಗೆ ಮನವಿ ಸಲ್ಲಿಸಿದರು   

ಸಿರವಾರ : ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೊಳಿಸಿ ಮೀಸಲಾತಿಯನ್ನು ಹೆಚ್ಚಳ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ವಾಲ್ಮೀಕಿ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮುಖಂಡ ವೈ.ಶರಣಯ್ಯ ನಾಯಕ ಗುಡದಿನ್ನಿ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ವಾಲ್ಮೀಕಿ ಪ್ರಸನ್ನಂದಪುರಿ ಸ್ವಾಮಿಜಿ ಧರಣಿ ನಡೆಸುತ್ತಿದ್ದರೂ ಒಬ್ಬರೂ ನಮಗೆ ಬೆಂಬಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಮುಖಂಡರಿಗೆ ಚುನಾವಣೆ ಸಮಯದಲ್ಲಿ ಕೇವಲ ಮತ ಪಡೆಯುದಕ್ಕೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳು ಬೇಕಾಗಿವೆ. ಮೀಸಲಾತಿ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡದೆ ಜಾರಿಗೆ ತರಬೇಕು ಆಗ್ರಹಿಸಲಾಯಿತು.

ADVERTISEMENT

ಹನುಮಂತ್ರಾಯ ಅತ್ತನೂರು, ಬಸವರಾಜ ಭಂಡಾರಿ, ಕೃಷ್ಣ ನಾಯಕ, ಅರಳಪ್ಪ ಯದ್ದಲದಿನ್ನಿ, ಬಸವರಾಜ ನಾಯಕ ಕಲ್ಲೂರು, ಜೆ. ಅಬ್ರಹಾಂ ಹೊನ್ನಟಗಿ ಮಾತನಾಡಿದರು.

ನಂತರ ಧರಣಿ ಸ್ಥಳಕ್ಕೆ ತಹಶೀಲ್ದಾರ್ ವಿಜಯೇಂದ್ರ ಹುಲಿ ನಾಯಕ ಭೇಟಿ ನೀಡಿ ಮನವಿ ಸ್ವೀಕರಿಸಿದರು.

ಪಿಎಸ್ಐ ಗೀತಾಂಜಲಿ ಶಿಂಧೆ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸೂರಿ ದುರುಗಣ್ಣ ನಾಯಕ, ಅಜಿತ್ ಕುಮಾರ ಹೊನ್ನಟಗಿ, ಈರಣ್ಣನಾಯಕ, ಗಣದಿನ್ನಿ, ವೆಂಕಟೇಶ ದೊರೆ, ಅಮರೇಶ ನಾಯಕ, ಯಲ್ಲಗೌಡ ಗಣದಿನ್ನಿ, ಚನ್ನಬಸವ ಗಡ್ಲ, ಅಯ್ಯಪ್ಪ ದೊರೆ ಹೀರಾ, ರಾಜಗೋಪಾಲ್ ನಾಯಕ, ರಂಗನಾಥ ನಾಯಕ, ಉಮಾಶಂಕರ ಬಲ್ಲಟಗಿ, ದುರುಗಪ್ಪ ಕಲಂಗೇರಾ, ಹನುಮೇಶ ಶಾಖಾಪುರ, ಮುಕ್ಕಣ್ಣ ಬಲ್ಲಟಗಿ, ಸೂರಿ ಅಮರೇಶ ನಾಯಕ, ಶಿವಪ್ಪ ನಾಯಕ ಕಲ್ಲೂರು, ಶಿವರಾಜ ನಾಯಕ ಮಾಚನೂರು, ಶಿವು ನಾಯಕ, ತಿಮ್ಮಾರೆಡ್ಡಿ ಮಾಚನೂರು, ಅಮರೇಶ ಅತ್ತನೂರು ಈ ಸಂದರ್ಭದಲ್ಲಿ ಇದ್ದರು.

ವರದಿ ಜಾರಿಗೆ ವಿರೋಧ

ರಾಯಚೂರು: ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವರದಿ ಹಾಗೂ ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಯಾದರೆ ಮೀಸಲಾತಿ ಪ್ರಮಾಣ
ಶೇ 50ರಿಂದ ಶೇ 56ಕ್ಕೆ ಹೆಚ್ಚಳವಾಗಲಿದೆ. ಇದು ಕಾನೂನು ಬಾಹಿರವಾಗಲಿದೆ. ನಾಗಮೋಹನ್ ದಾಸ್ ವರದಿ ಜಾರಿ ಮಾಡಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಡಾ.ಅಂಬೇಡ್ಕರ್ ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್(ಎಸ್‌ಸಿಎಫ್)ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಚ್.ಎನ್. ನಾಗಮೋಹನ್‌ ದಾಸರವರ ಆಯೋಗವು ಮಾಡಿದ ವರದಿ ಶಿಫಾರಸ್ಸು ಜಾರಿ ಮಾಡಿದರೆ ಮೀಸಲಾತಿ ಪ್ರಮಾಣವು ಶೇ.56 ಕ್ಕೆ ಏರಿಕೆಯಾಗುತ್ತದೆ. 1992ರ ಪ್ರಕರಣವೊಂದರಲ್ಲಿ ಸರ್ವೋಚ್ಛ ನ್ಯಾಯಾಲಯದ 9ನ್ಯಾಯಾಧೀಶರನ್ನೊಳಗೊಂಡ ಪೀಠವು ಯಾವುದೇ ಹಂತದಲ್ಲಿ ಮೀಸಲಾತಿಯು ಶೇ.50 ಮೀರಬಾರದೆಂದು ಆದೇಶ ಮಾಡಿರುತ್ತದೆ. ಹೀಗಾಗಿ ಸರಕಾರ ಒಂದು ವೇಳೆ ನಾಗಮೋಹನದಾಸ ವರದಿಯನ್ನು ಜಾರಿಗೆ ತಂದರೆ ಅದರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇನೆ ಎಂದರು.

ಮುಖಂಡರಾದ ಸಿ.ಎಂ. ನಾರಾಯಣ, ಭೀಮೇಶ, ಕಮಲ್ ಆಂಜನೇಯ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.