ADVERTISEMENT

ರಥ ಮುಟ್ಟಿದ್ದಕ್ಕೆ ಪರಿಶಿಷ್ಟರಿಗೆ ಬಹಿಷ್ಕಾರ: ತಿಡಿಗೋಳದಲ್ಲಿ ಬಿಗುವಿನ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 3:21 IST
Last Updated 14 ಅಕ್ಟೋಬರ್ 2022, 3:21 IST
ಪೊಲೀಸ್ ಭದ್ರತೆ (ಸಾಂದರ್ಭಿಕ ಚಿತ್ರ)
ಪೊಲೀಸ್ ಭದ್ರತೆ (ಸಾಂದರ್ಭಿಕ ಚಿತ್ರ)   

ಸಿಂಧನೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ತಿಡಿಗೋಳ ಗ್ರಾಮದಲ್ಲಿ ರಥ ಮುಟ್ಟಿದ ಕಾರಣಕ್ಕೆ ಪರಿಶಿಷ್ಟ ಜಾತಿಯ ಯುವಕರ ಮೇಲೆ ಲಿಂಗಾಯತ ಸಮುದಾಯದ ಯುವಕರು ಹಲ್ಲೆ ಮಾಡಿದ ಘಟನೆ ನಡೆದು ಎರಡು ವಾರಗಳಾಗಿವೆ. ಹಲವು ಬಾರಿ ಸಂಧಾನಕ್ಕೆ ಪ್ರಯತ್ನಿಸಿದರೂ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ಅಘೋಷಿತ ಬಹಿಷ್ಕಾರ ಕೊನೆಗೊಂಡಿಲ್ಲ.

‘ಗಿರಣಿ ಅಂಗಡಿಯಲ್ಲಿ ಹಿಟ್ಟು ಹಾಕುವುದಿಲ್ಲ, ಕಿರಾಣಿ ಅಂಗಡಿಯಲ್ಲಿ ವಸ್ತುಗಳನ್ನು ನೀಡುವುದಿಲ್ಲ, ಹೋಟೆಲ್‌ನಲ್ಲಿ ಚಹಾ ಕುಡಿಯಲು ಕೂಡ ನಿರ್ಬಂಧಿಸಲಾಗಿದೆ’ ಎಂದು ಪರಿಶಿಷ್ಟ ಜಾತಿಯವರುಸಮಸ್ಯೆ ತೋಡಿಕೊಂಡರು. ಅಧಿಕಾರಿಗಳು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ, ಬಿಗುವಿನ ಪರಿಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.