ಮುಳುಗಿರುವ ಶೀಲಹಳ್ಳಿ ಸೇತುವೆ
– ಪ್ರಜಾವಾಣಿ ಚಿತ್ರ
ಲಿಂಗಸುಗೂರು (ರಾಯಚೂರು ಜಿಲ್ಲೆ): ನಾರಾಯಣಪುರ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಕೃಷ್ಣಾ ನದಿಗೆ ಹರಿಸುತ್ತಿದ್ದು, ಬುಧವಾರ ಬೆಳಗಿನ ಜಾವ ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.
ಮಂಗಳವಾರ ಮಧ್ಯರಾತ್ರಿ ಅಣೆಕಟ್ಟೆಯಿಂದ 1.77ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಶೀಲಹಳ್ಳಿ ಸೇತುವೆ ಮುಳುಗಡೆ ಆಗಿದ್ದರಿಂದ ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ನಡುಗಡ್ಡೆ ಗ್ರಾಮಗಳ ಜನತೆ ಬಾಹ್ಯ ಸಂಪರ್ಕ ಹೊಂದಲು 45ಕಿ.ಮೀ ಸುತ್ತುಬಳಸಿ ತಾಲ್ಲೂಕು ಕೇಂದ್ರಕ್ಕೆ ಬರುವಂತಾಗಿದೆ.
ಪ್ರವಾಹ ಹೆಚ್ಚಿದ್ದರಿಂದ ಕೃಷ್ಣಾ ತಟದಲ್ಲಿನ ರೈತರ ಪಂಪಸೆಟ್ ಹಾಗೂ ಪೈಪ್‌ಗಳು ಕೊಚ್ಚಿ ಹೋಗಿವೆ. ವಿದ್ಯುತ್ ಕಂಬಗಳು ವಾಲಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ರೈತ ಮೌನೇಶ ಪೂಜಾರಿ ತಿಳಿಸಿದ್ದಾರೆ.
ತಹಶೀಲ್ದಾರ್ ಶಂಶಾಲಂ ನೇತೃತ್ವದ ತಂಡ ಮಂಗಳವಾರ ಮಧ್ಯರಾತ್ರಿ ಹೆಚ್ಚುವರಿ ನೀರು ಬಿಡುವ ಮುನ್ಸೂಚನೆ ಮೇರೆಗೆ ಶೀಲಹಳ್ಳಿ ಸೇತುವೆ ಮುಳುಗಡೆ ಭೀತಿಯಿಂದ ವಾಹನ, ಜನ ಸಂಚರಿಸದಂತೆ ಪೊಲೀಸ್ ಕಾವಲು ಹಾಕಿಸಿ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.