ADVERTISEMENT

ಸಿಂಧನೂರು: ಮತ ಬೇಕಾದರೆ ಭೂಮಿ ಕೊಡಿ: ಡಿ.ಎಚ್.ಪೂಜಾರ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 6:04 IST
Last Updated 1 ಫೆಬ್ರುವರಿ 2023, 6:04 IST
ಡಿ.ಎಚ್.ಪೂಜಾರ್
ಡಿ.ಎಚ್.ಪೂಜಾರ್   

ಸಿಂಧನೂರು: ‘ವಿಧಾನಸಭಾ ಚುನಾವ ಣೆಯಲ್ಲಿ ಮತ ಬೇಕಾದರೆ ಕಳೆದ 20 ವರ್ಷಗಳಿಂದ ಭೂ ಮಂಜೂರಾತಿಗಾಗಿ ಹೋರಾಡುತ್ತಿರುವ ಜಿಲ್ಲೆಯ ಸಾವಿರಾರು ರೈತರಿಗೆ ಪಟ್ಟಾ ನೀಡಬೇಕು. ಇಲ್ಲದಿದ್ದರೆ ಮನೆಗೆ ನಡೆಯಿರಿ’ ಎಂದು ಕೆಆರ್‌ಎಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘1991, 1999 ಹಾಗೂ 2018ರ ಅವಧಿಯಲ್ಲಿ ಫಾರಂ ನಂ.51, 53, 57 ರಡಿ ಅರ್ಜಿ ಸಲ್ಲಿಸಿದ ಶೇ 95 ರಷ್ಟು ಅರ್ಹ ರೈತರಿಗೆ ಭೂ ಮಂಜೂರಾತಿ ದೊರೆತಿಲ್ಲ. ಮೂರು ಹಂತದಲ್ಲಿ ಜಾರಿಗೊಳಿಸಿದ ಅಕ್ರಮ ಸಕ್ರಮ ಕಾಯ್ದೆ ಸಂಪೂರ್ಣ ವಿಫಲಗೊಂಡಿದೆ. ಶಾಸಕರುಗಳು ಆಯಾ ಕಾಲಾವಧಿಯಲ್ಲಿ ತಮ್ಮ ಹಿಂಬಾಲಕರಿಗೆ ಮಾತ್ರ ಭೂಮಿ ಕೊಡಿಸಿ ಅರ್ಹ ರೈತರಿಗೆ ದ್ರೋಹ ಬಗೆದಿದ್ದಾರೆ’ ಎಂದು ದೂರಿದರು.

‘2018ರಲ್ಲಿ ಫಾರಂ ನಂ.57ರ ಅಡಿಯಲ್ಲಿ ಸಲ್ಲಿಸಿದ 80 ರಿಂದ 90 ರಷ್ಟು ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸಲಾಗಿದೆ. ಹೀಗಾಗಿ ಮಸ್ಕಿ, ಸಿಂಧನೂರು, ರಾಯಚೂರು, ಮಾನ್ವಿ, ಸಿರವಾರ, ಲಿಂಗಸುಗೂರು, ದೇವದುರ್ಗದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗಿತ್ತು. ಆಗ ಜಿಲ್ಲಾಧಿಕಾರಿ ಚಂದ್ರಶೇಖರ ಎಲ್.ನಾಯಕ ಅವರು ಭೂ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಗೆ ಆರು ತಿಂಗಳಾದರೂ ಸಭೆ ಕರೆದಿಲ್ಲ. ಇದರಿಂದ ಇವರು ಬಡ ರೈತರ ಪರನೋ ಅಥವಾ ಶ್ರೀಮಂತರ ಪರವನೋ ಎಂಬುದು ತಿಳಿಯದಂತಾಗಿದೆ.

ADVERTISEMENT

ಕೂಡಲೇ ಭೂ ಸಮಸ್ಯೆ ಪರಿಹರಿಸಿ ಅನುಕೂಲ ಮಾಡಿಕೊಡದಿದ್ದರೆ ಮುಂದಿನ ಚುನಾವಣೆಯಲ್ಲಿ ಮತ ದಾನ ಬಹಿಷ್ಕರಿಲಾಗುವುದು’ ಎಂದು ಅವರು ಎಚ್ಚರಿಸಿದರು.

ಕೆಆರ್‌ಎಸ್ ಜಿಲ್ಲಾ ಘಟಕದ ಕಾರ್ಯ ದರ್ಶಿ ಬಿ.ಎನ್.ಯರದಿಹಾಳ, ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ ಬೇರಿಗಿ ಹಾಗೂ ಉಪಾಧ್ಯಕ್ಷ ಚಿಟ್ಟಿಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.