ADVERTISEMENT

ಸಿಂಧನೂರು | ನಿರಂತರ ಅಭ್ಯಾಸ ಮಾಡಿ ಪ್ರತಿಭಾವಂತರಾಗಿ–ಭೀಮಸೇನಾಚಾರ್ಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 8:04 IST
Last Updated 25 ಫೆಬ್ರುವರಿ 2026, 8:04 IST
ಸಿಂಧನೂರಿನ ಉಪ್ಪಾರವಾಡಿಯ ಗುರುಸಿದ್ದಯ್ಯನ ಮಠದ ಕಾಲೊನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಶಿಷ್ಠಧಾಮ ಸೇವಾ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಕಂಪಾಸ್ ಬಾಕ್ಸ್ ಹಾಗೂ ವಾಟರ್ ವಾಟಲ್ ವಿತರಿಸಲಾಯಿತು
ಸಿಂಧನೂರಿನ ಉಪ್ಪಾರವಾಡಿಯ ಗುರುಸಿದ್ದಯ್ಯನ ಮಠದ ಕಾಲೊನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಶಿಷ್ಠಧಾಮ ಸೇವಾ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಕಂಪಾಸ್ ಬಾಕ್ಸ್ ಹಾಗೂ ವಾಟರ್ ವಾಟಲ್ ವಿತರಿಸಲಾಯಿತು   

ಸಿಂಧನೂರು: ಸಾಹಿತ್ಯ, ಸಂಗೀತ, ನೃತ್ಯ, ಕಲೆಗಳನ್ನು ನಿರಂತರವಾಗಿ ಅಭ್ಯಾಸ ಮಾಡಿ ವಿದ್ಯಾರ್ಥಿಗಳು ಸಮಾಜದಲ್ಲಿ ಪ್ರತಿಭಾವಂತರಾಗಿ ಹೊರಹೊಮ್ಮಬೇಕು ಎಂದು ವಶಿಷ್ಠಧಾಮ ಸೇವಾ ಟ್ರಸ್ಟ್ ಅಧ್ಯಕ್ಷ ಭೀಮಸೇನಾಚಾರ್ಯ ನವಲಿ ಸಲಹೆ ನೀಡಿದರು.

ನಗರದ ಉಪ್ಪಾರವಾಡಿಯ ಗುರುಸಿದ್ದಯ್ಯನ ಮಠದ ಕಾಲೊನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಶಿಷ್ಠಧಾಮ ಸೇವಾ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕಂಪಾಸ್ ಬಾಕ್ಸ್ ಹಾಗೂ ವಾಟರ್ ವಾಟಲ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖಂಡ ಸುಧಾಕರರಾವ್ ಕುಲಕರ್ಣಿ ಕಲಬುರಗಿ ಮಾತನಾಡಿ, ತಂದೆ ತಾಯಿ ಹಾಗೂ ಗುರುಗಳ ಮಾತುಗಳನ್ನು ಕೇಳಿ ವಿದ್ಯಾವಂತರಾಗಿ ಒಳ್ಳೆಯ ಪ್ರಜೆಗಳಾಗಬೇಕು ಎಂದರು.

ADVERTISEMENT

‌ಮುಖ್ಯಶಿಕ್ಷಕಿ ಸಾವಿತ್ರಿ ದೀಕ್ಷಿತ್, ಶೋಭಾ ನವಲಿ, ಪ್ರಭಾರಿ ಮುಖ್ಯಶಿಕ್ಷಕ ಗಿರೀಶ ವಿ.ಬಿ ಮಾತನಾಡಿದರು. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ಹುಲಿಗೆಮ್ಮ ಮತ್ತು ಶಿಕ್ಷಕರು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.