
ರಾಯಚೂರು ಹೊರವಲಯದ ಸಾತ್‍ಮೈಲ್ ಸಮೀಪ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ ಬಿದ್ದಿದೆ
ರಾಯಚೂರು: ನಗರದ ಹೊರವಲಯದ ಸಾತ್‍ಮೈಲ್ ಸಮೀಪ ಸೋಮವಾರ ಬೆಳಗಿನ ಜಾವ ಹೊಸಪೇಟೆಯಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ 13 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಹುಣಸಿಹಾಳಹುಡಾ ಗ್ರಾಮಕ್ಕೆ ಹೊರಡುವ ರಸ್ತೆ ಪಕ್ಕದಲ್ಲಿ ಬಸ್ ಪಲ್ತಿಯಾಗಿದೆ. ಗ್ರಾಮಸ್ಥರು ಹಾಗೂ ಪೆಟ್ರೋಲ್ ಬಂಕ್ ಸಿಬ್ಬಂದಿ ಸ್ಥಳಕ್ಕೆ ಬಂದ ಪ್ರಯಾಣಿಕರನ್ನು ಹೊರಗೆ ತೆಗೆದಿದ್ದಾರೆ. .
ಅಪಘಾತದಲ್ಲಿ ಪ್ರತಾಪ್ ಸಿಂಗ್ ಅವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಚ್.ಎಂ. ಸ್ವಪ್ನಾ ಹಾಗೂ ವೀರೇಶ ಅವರ ಎಡಗೈ ಮೂಳೆ ಮುರಿದಿದೆ. ಉಷಾ, ಮಂಜುನಾಥ, ಶ್ರೇಯಸ್, ಕೊಟ್ರಪ್ಪ, ದೀಪಾ, ಲಲಿತಾ ಹಜಾರೆ, ರೇಣುಕಾ, ಪ್ರಿಯಾಂಕ, ಶ್ವೇತಾ ಹಾಗೂ ಶಾದಾಬಾಯಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನ ಒಂದು ಭಾಗ ನಜ್ಜುಗುಜ್ಜಾಗಿದೆ.
ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.