
ರಾಯಚೂರು: ‘ಪ್ರತಿ ಮಗು ಕ್ರೀಡೆಯಲ್ಲಿ ಭಾಗವಹಿಸಬೇಕು. ಅವರ ದೈಹಿಕ ಮಾನಸಿಕ ಬೌದ್ಧಿಕ ಬೆಳವಣಿಗೆಯಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ದೈಹಿಕ ನಿರ್ದೇಶಕ ರಾಜಣ್ಣ ಹೇಳಿದರು.
ಇಲ್ಲಿಯ ಬಸವಶ್ರೀ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿನಿಯರು ಹೆಚ್ಚಿನ ಆಸಕ್ತಿ ಆಟದಲ್ಲಿ ತೊಡಗಿರಬೇಕು. ಆಟದಿಂದ ನಾಯಕತ್ವದ ಗುಣಗಳು, ಆಟದ ಉತ್ಸಾಹ, ಸೋಲು ಗೆಲುವು ಎಲ್ಲದರ ಅನುಭವ ಸ್ವೀಕರಿಸಿ ಯಶಸ್ಸಿನತ್ತ ಸಾಗಬೇಕು’ ಎಂದು ತಿಳಿಸಿದರು.
ಶಾಲೆಯ ಸಂಸ್ಥಾಪಕಿ ಲಲಿತಾ ಎಂ. ಮಾತನಾಡಿದರು. ಸುಗುಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ. ಬಸನಗೌಡ, ಶಾರದ ದಯಾಸಾಗರ, ಕ್ರೀಡಾ ಶಿಕ್ಷಕ ಆಂಥೋನಿ ಉಪಸ್ಥಿತರಿದ್ದರು.
ಶಾಲೆಯ ಮಕ್ಕಳು ಸಮವಸ್ತ್ರದಲ್ಲಿ ಲೇಜಿಮ್, ಡಂಬಲ್ಸ್, ಬೊಂಬು, ಬಳಸಿ ಆಕರ್ಷಕವಾಗಿ ನೃತ್ಯ ಪ್ರದರ್ಶಿಸಿದರು. ನಂತರ ಕ್ರೀಡೆ ವಿಜೇತರಿಗೆ ಬಹುಮಾನವಾಗಿ ಪದಕ, ಟ್ರೋಫಿ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಆಂಥೋನಿ ಮಕ್ಕಳಿಗೆ ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.