ADVERTISEMENT

ಸಿಂಧನೂರು ಶ್ರೀಚಕ್ರ ಸಹಕಾರಿಗೆ ₹21 ಲಕ್ಷ ಲಾಭ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 7:41 IST
Last Updated 9 ಸೆಪ್ಟೆಂಬರ್ 2025, 7:41 IST
ಸಿಂಧನೂರಿನಲ್ಲಿ ನಡೆದ ಸಭೆಯಲ್ಲಿ ಶ್ರೀಚಕ್ರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಡಿ.ವಿ.ಬಿ.ರಂಗರಾಜು ಮಾತನಾಡಿದರು 
ಸಿಂಧನೂರಿನಲ್ಲಿ ನಡೆದ ಸಭೆಯಲ್ಲಿ ಶ್ರೀಚಕ್ರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಡಿ.ವಿ.ಬಿ.ರಂಗರಾಜು ಮಾತನಾಡಿದರು    

ಸಿಂಧನೂರು: ‘ಶ್ರೀಚಕ್ರ ಸೌಹಾರ್ದ ಸಹಕಾರ ಸಂಘ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹7.39 ಕೋಟಿ ವ್ಯವಹಾರ ಮಾಡುವ ಮೂಲಕ ₹21.86 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಡಿ.ವಿ.ಬಿ.ರಂಗರಾಜು ಹೇಳಿದರು.

ಸಂಘದ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ 3ನೇ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ,‘ಸದಸ್ಯರ ಮತ್ತು ಸಿಬ್ಬಂದಿಯ ಸಹಕಾರದಿಂದ ಸಂಸ್ಥೆ ಉತ್ತಮ ಬೆಳವಣಿಗೆ ಕಂಡಿದೆ. ಶೇ 12ರಷ್ಟು ಲಾಭಾಂಶ ನೀಡಲಾಗುವುದು’ ಎಂದು ತಿಳಿಸಿದರು.

ಸಂಘದ ನಿರ್ದೇಶಕರಾದ ಕೆ.ಶಿವಪ್ಪ ಹೊಸಳ್ಳಿ, ಕೆ.ಕೃಷ್ಣಾರೆಡ್ಡಿ, ಎನ್.ಶ್ರೀಧರ, ಮಲ್ಲಪ್ಪ ಮೈಲಾರ, ಲಕ್ಷ್ಮಪ್ಪ ಹಂಚಿನಾಳ, ಪಿ.ಪ್ರವೀಣಕುಮಾರ, ಕೆ.ಪ್ರಕಾಶ, ಈರಮ್ಮ ಲಕ್ಷ್ಮಯ್ಯಶೆಟ್ಟಿ, ಉಷಾ ಪ್ರಭಾಕರ ಕುಲಕರ್ಣಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.