ADVERTISEMENT

ಬಸ್‍ ನಿಲುಗಡೆಗೆ ವಿದ್ಯಾರ್ಥಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 11:12 IST
Last Updated 15 ಜುಲೈ 2022, 11:12 IST
ಕವಿತಾಳ ಸಮೀಪದ ವಟಗಲ್‍ ಗ್ರಾಮದಲ್ಲಿ ಬುಧವಾರ ವಿದ್ಯಾರ್ಥಿಗಳು ಬಸ್‍ ತಡೆದು ಆಕ್ರೋಶ ವ್ಯಕ್ತಪಡಿಸಿದರು
ಕವಿತಾಳ ಸಮೀಪದ ವಟಗಲ್‍ ಗ್ರಾಮದಲ್ಲಿ ಬುಧವಾರ ವಿದ್ಯಾರ್ಥಿಗಳು ಬಸ್‍ ತಡೆದು ಆಕ್ರೋಶ ವ್ಯಕ್ತಪಡಿಸಿದರು   

ಕವಿತಾಳ: ಬಸ್‍ ನಿಲ್ಲಿಸದ ಪರಿಣಾಮ ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದಲ್ಲಿ ವಿದ್ಯಾರ್ಥಿಗಳು ಮತ್ತು ನಿರ್ವಾಹಕನ ನಡುವೆ ವಾಗ್ವಾದ ನಡೆದು ಬಸ್‍ ತಡೆದು ನಿಲ್ಲಿಸಿದ ಘಟನೆ ಬುಧವಾರ ನಡೆಯಿತು.

‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲಿಂಗಸೂಗೂರು ಪಟ್ಟಣದಿಂದ ಕವಿತಾಳಕ್ಕೆ ಬೆಳಿಗ್ಗೆ ಬಂದು ಹೋಗುತ್ತಿದ್ದ ಹೆಚ್ಚುವರಿ ಬಸ್‍ ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ನಿತ್ಯ ಪರದಾಡುವಂತಾಗಿದೆ. ರಾಯಚೂರಿನಿಂದ ಬರುವ ಬಸ್‌ಗಳು ಪ್ರಯಾಣಿಕರಿಂದ ತುಂಬಿವೆ ಎಂದು ನಿಲ್ಲಿಸಲು ನಿರ್ವಾಹಕರು ನಿರಾಕರಿಸುತ್ತಿರುವ ಪರಿಣಾಮ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ವಿದ್ಯಾರ್ಥಿಗಳು ಮತ್ತು ನಿರ್ವಾಹಕ, ಚಾಲಕರ ನಡುವೆ ವಾಗ್ವಾದ ನಡೆದು ಒಂದು ಗಂಟೆ ಬಸ್‍ ತಡೆದ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ನಿರ್ವಾಹಕನ ಮನವೊಲಿಸಿ ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಕಳುಹಿಸಿದರು.

ADVERTISEMENT

‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಕಾಲೇಜು ಸಮಯಕ್ಕೆ ಸರಿಯಾಗಿ ಪ್ರತ್ಯೇಕ ಬಸ್‍ ಸಂಚಾರ ಆರಂಭಿಸಬೇಕು. ಬಸ್‍ ನಿಲುಗಡೆ ಮಾಡುವಂತೆ ನಿರ್ವಾಹಕರಿಗೆ ಸೂಚಿಸಬೇಕು’ ಎಂದು ಮುಖಂಡ ಶಿವಕುಮಾರ ಪಾಟೀಲ್‍ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.