ADVERTISEMENT

ರಾಯಚೂರು: ‘ಮಣ್ಣಿನ ಫಲವತ್ತತೆ ಆಧರಿಸಿ ಸೂರ್ಯಕಾಂತಿ ಇಳುವರಿ’

ಸಾಸಿವೆಗೇರಾದಲ್ಲಿ ಸೂರ್ಯಕಾಂತಿ ಗುಚ್ಚಪ್ರಾತ್ಯಕ್ಷತೆ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 13:33 IST
Last Updated 29 ಸೆಪ್ಟೆಂಬರ್ 2022, 13:33 IST
ರಾಯಚೂರು ಜಿಲ್ಲೆ ದೇವದರ್ಗ ತಾಲ್ಲೂಕಿನ ಸಾಸಿವೆಗೇರಾ ಗ್ರಾಮದ ರುಕ್ಕಪ್ಪ ಇವರ ಹೊಲದಲ್ಲಿ ಬುಧವಾರ ಏರ್ಪಡಿಸಿದ್ದ ಸೂರ್ಯಕಾಂತಿ ಬೆಳೆಯ ಕ್ಷೇತೋತ್ಸವದಲ್ಲಿ ಸೂರ್ಯಕಾಂತಿ ವಿಭಾಗದ ವಿಜ್ಞಾನಿ ಡಾ.ಪೂರ್ಣಿಮಾ ಮಾತನಾಡಿದರು.
ರಾಯಚೂರು ಜಿಲ್ಲೆ ದೇವದರ್ಗ ತಾಲ್ಲೂಕಿನ ಸಾಸಿವೆಗೇರಾ ಗ್ರಾಮದ ರುಕ್ಕಪ್ಪ ಇವರ ಹೊಲದಲ್ಲಿ ಬುಧವಾರ ಏರ್ಪಡಿಸಿದ್ದ ಸೂರ್ಯಕಾಂತಿ ಬೆಳೆಯ ಕ್ಷೇತೋತ್ಸವದಲ್ಲಿ ಸೂರ್ಯಕಾಂತಿ ವಿಭಾಗದ ವಿಜ್ಞಾನಿ ಡಾ.ಪೂರ್ಣಿಮಾ ಮಾತನಾಡಿದರು.   

ರಾಯಚೂರು: ಸೂರ್ಯಕಾಂತಿ ಬೆಳೆಯ ಇಳುವರಿಯ ಮೇಲೆ ಮಣ್ಣಿನ ಫಲವತ್ತತೆ ಪ್ರಮಖ ಪಾತ್ರ ವಹಿಸುತ್ತದೆ ಎಂದು ರಾಯಚೂರು ಕೃಷಿ ವಿಜ್ಞಾನ ಕೇಂದ್ರ ಮಣ್ಣು ವಿಜ್ಞಾನಿ ಡಾ.ಎಸ್. ಎನ್. ಭಟ್ ಹೇಳಿದರು.

ದೇವದರ್ಗ ತಾಲ್ಲೂಕಿನ ಸಾಸಿವೆಗೇರಾ ಗ್ರಾಮದ ರುಕ್ಕಪ್ಪ ಇವರ ಹೊಲದಲ್ಲಿ ರಾಯಚೂರು ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಖಿಲ ಭಾರತ ಸೂರ್ಯಕಾಂತಿ ಯೋಜನೆಯಿಂದ ರಾಷ್ಟ್ರೀಯ ತಾಳೆ ಹಾಗೂ ಎಣ್ಣಿಕಾಳು ಬೆಳೆ ಯೋಜನೆಯಡಿಯಲ್ಲಿ ಬುಧವಾರ ಏರ್ಪಡಿಸಿದ್ದ ಸೂರ್ಯಕಾಂತಿ ಬೆಳೆಯ ಕ್ಷೇತೋತ್ಸವದಲ್ಲಿ ಮಾತನಾಡಿದರು.

ಆದ್ದರಿಂದ ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ನಿರ್ವಹಣೆಯಿಂದ ಸೂರ್ಯಕಾಂತಿ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ADVERTISEMENT

ಕ್ಷೇತ್ರೋತ್ಸವದ ಅಧ್ಯಕ್ಷ ವಹಿಸಿದ್ದ ಸೂರ್ಯಕಾಂತಿ ವಿಭಾಗದ ಮುಖ್ಯಸ್ಥ ಡಾ.ವಿಕಾಸ ಕುಲಕರ್ಣಿ ಮಾತನಾಡಿ, ಸೂರ್ಯಕಾಂತಿ ಸಂಕರಣ ತಳಿ (ಆರ್‌ಎಸ್‌ಎಫ್‌ಎಚ್‌-1887) ಗುಣಧರ್ಮ ಹಾಗೂ ಕಾಳಕಟ್ಟುವಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ತಿಳಿಸಿದರು.

ಇತ್ತೀಚಿನ ದಿವಸಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಅಕಾಲಿಕ ಮಳೆ ಸಂಭವಿಸಿ ಹೂವಿನ ಮೇಲಿರುವ ಪರಾಗಗಳು ಮಳೆಯ ನೀರಿನಿಂದ ತೊಳೆದುಹೋಗಿ ಕಾಳುಕಟ್ಟುವಿಕೆ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ ಎಂದು ತಿಳಿಸಿದರು.

ಬೇಸಾಯ ತಜ್ಞ ಡಾ.ಉಮೇಶ ಎಂ.ಆರ್. ಮಾತನಾಡಿ, ಸೂರ್ಯಕಾಂತಿ ಇಳುವರಿಯನ್ನು ಹೆಚ್ಚಿಸಲು ರೈತರ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತಿಳಿಸಿದರು. ಸೂರ್ಯಕಾಂತಿ ವಿಭಾಗದ ವಿಜ್ಞಾನಿ ಡಾ.ಪೂರ್ಣಿಮಾ ಅವರು ಸೂರ್ಯಕಾಂತಿ ಬೆಳೆಯಲ್ಲಿ ಬರುವ ಪ್ರಾಮುಖ ರೋಗಗಳು , ಗುಣಲಕ್ಷಣಗಳು ಮತ್ತು ಅವುಗಳ ಹತೋಟಿ ಕ್ರಮಗಳ ಬಗ್ಗೆ ತಿಳಿಸಿದರು.

ರೈತರ ಅನಿಸಿಕೆ: ಸೂರ್ಯಕಾಂತಿ ಸಂಕರಣ ತಳಿ ಆರ್‌ಎಸ್‌ಎಫ್‌ಎಚ್‌-1887 ಉತ್ತಮವಾದ ಸಂಕರಣ ತಳಿಯಾಗಿದೆ. ಕಡಿಮೆ ಫಲವತ್ತತೆಯ ಭೂಮಿಯಲ್ಲಿ ಬೆಳೆದರೂ ಸಹ ಎಕರೆಗೆ 3.5 ಯಿಂದ 4 ಕ್ವಿಂಟಲ್ ಇಳುವರಿಯನ್ನು ಮಳೆಯಾಶ್ರಿತ ಸನ್ನಿವೇಶದಲ್ಲಿ ತೆಗೆಯಬಹುದಾಗಿದೆ ಎಂದು ಹೇಳಿದರು.ಈ ಕ್ಷೇತ್ರೋತ್ಸವ 35 ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.