ADVERTISEMENT

ಸಿಂಧನೂರು: ಚುನಾವಣೆ ಸ್ಪರ್ಧಿಸುವಂತೆ ಮುಖಂಡ ಕರಿಯಪ್ಪಗೆ ಬೆಂಬಲಿಗರ ಪಟ್ಟು

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 6:23 IST
Last Updated 19 ಜನವರಿ 2023, 6:23 IST
ಕೆ.ಕರಿಯಪ್ಪ
ಕೆ.ಕರಿಯಪ್ಪ   

ಸಿಂಧನೂರು: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಏನೇ ಕಷ್ಟಗಳು ಎದುರಾದರೂ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದಿಂದ ಹಿಂದಕ್ಕೆ ಸರಿಯಬಾರದು ಎಂದು ಕೆ.ಕರಿಯಪ್ಪ ಅವರಿಗೆ ಬೆಂಬಲಿಗರು ಪಟ್ಟುಹಿಡಿದು ಒತ್ತಾಯಿಸಿದ್ದಾರೆ.

ನಗರದ ಕೆ.ಕರಿಯಪ್ಪ ಅವರ ಕಚೇರಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಬೆಂಬಲಿಗರ ಸಭೆ ಬುಧವಾರ ನಡೆದಿದೆ.

‘ಕಾಂಗ್ರೆಸ್ ಪಕ್ಷದಲ್ಲಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಮುಖಂಡರು ಯಾವುದೇ ಸ್ವರೂಪದಲ್ಲಿ ಸ್ಥಾನಮಾನ ಮತ್ತು ಗೌರವ ಕೊಟ್ಟಿಲ್ಲ. ಸಭೆ, ಸಮಾರಂಭಗಳಿಗೆ ಆಹ್ವಾನ ನೀಡಿಲ್ಲ. ಆದಾಗ್ಯೂ ಪಕ್ಷದ ನಿಷ್ಠಾವಂತರಾಗಿ ದುಡಿಯುವ ನಿಮಗೆ ಹೈಕಮಾಂಡ್ ಮಾತ್ರ ಪರಿಗಣಿಸುತ್ತಾ ಬಂದಿದೆ. ಆ ಕಾರಣಕ್ಕಾಗಿ ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೀರಿ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕೇಳುವ ಹಕ್ಕು ಪಡೆದಿದ್ದೀರಿ. ಒಂದು ವೇಳೆ ಪಕ್ಷದ ಟಿಕೆಟ್ ಸಿಗದಿದ್ದರೂ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಲೇ ಬೇಕು’ ಎಂದು ಬೆಂಬಲಿಗರು ಒತ್ತಾಯಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಬಾರಿ ತಮ್ಮನ್ನು ಪಕ್ಷ ಪರಿಗಣಿಸುತ್ತದೆನ್ನುವ ವಿಶ್ವಾಸವಿದೆ. ಕೊನೆಯ ಹಂತದವರೆಗೆ ಕಾದು ನೋಡೋಣ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ತಮ್ಮ ಬೆಂಬಲಿಗರ ಮನವೊಲಿಸಿದರು.

ಪ್ರಚಾರಕ್ಕೆ ಸಿದ್ಧತೆ: ಇದೇ ಜನವರಿ 20 ರಿಂದ ಕ್ಷೇತ್ರದಾದ್ಯಂತ ಸಂಚರಿಸಿ ಹಿರಿಯರ, ಬೆಂಬಲಿಗರ, ಅಭಿ ಮಾನಿಗಳ, ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿ, ಚುನಾವಣೆ ಯಲ್ಲಿ ತಮ್ಮನ್ನು ಗೆಲ್ಲಿಸುವಂತೆ ಪ್ರಚಾರ ಕಾರ್ಯ ಆರಂಭಿಸುವುದಾಗಿ ಬೆಂಬಲಿಗರ ಸಭೆಯಲ್ಲಿ ಕೆ.ಕರಿಯಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.