ADVERTISEMENT

ಸಂಭ್ರಮದಿಂದ ನಾಗಚತುರ್ಥಿ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 12:49 IST
Last Updated 12 ಆಗಸ್ಟ್ 2021, 12:49 IST
ಲಿಂಗಸುಗೂರ ದೇವಸ್ಥಾನದಲ್ಲಿ ನಾಗಚತುರ್ಥಿ ನಿಮಿತ್ತ ಗುರುವಾರ ನಾಗದೇವತೆ ಮೂರ್ತಿಗಳಿಗೆ ಮಹಿಳೆಯರು ಮಕ್ಕಳು ಪೂಜೆ ಸಲ್ಲಿಸಿದರು
ಲಿಂಗಸುಗೂರ ದೇವಸ್ಥಾನದಲ್ಲಿ ನಾಗಚತುರ್ಥಿ ನಿಮಿತ್ತ ಗುರುವಾರ ನಾಗದೇವತೆ ಮೂರ್ತಿಗಳಿಗೆ ಮಹಿಳೆಯರು ಮಕ್ಕಳು ಪೂಜೆ ಸಲ್ಲಿಸಿದರು   

ಲಿಂಗಸುಗೂರು: ಶ್ರಾವಣ ಮಾಸದ ಮೊದಲ ಹಬ್ಬ ಸಹೋದರ, ಸಹೋದರಿಯರು ಕೂಡಿ ಆಚರಿಸುವ ನಾಗಚತುರ್ಥಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಗುರುವಾರ ದೇವಸ್ಥಾನ, ಜಮೀನುಗಳಲ್ಲಿನ ಹಾವಿನ ಹುತ್ತ, ನಾಗದೇವತೆಗಳ ಕಲ್ಲಿನ ಮೂರ್ತಿಗಳಿಗೆ ಮಹಿಳೆಯರು, ಮಕ್ಕಳು ತೆರಳಿ ಕೊಬ್ಬರಿ ಬಟ್ಟಲದಿಂದ ಹಾಲೆರೆದು ನೈವೇದ್ಯ ಸಲ್ಲಿಸುತ್ತಿರುವುದು ಕಂಡು ಬಂತು.

ಜನರು ಹೆಸರು, ಎಳ್ಳು, ಶೇಂಗಾ, ಸಜ್ಜೆ, ರವೆ ಸೇರಿದಂತೆ ವೈವಿಧ್ಯಮಯ ಉಂಡಿಗಳನ್ನು ಸಿದ್ಧಪಡಿಸಿಕೊಂಡು ಹರಳು (ಜೋಳ ಉರಿದು ಮಾಡಿದ), ನೂಲಿನ ದಾರ ಸಮೇತ ಪೂಜೆಗೆ ಆಗಮಿಸಿದ್ದರು.

ADVERTISEMENT

ಪೂಜೆ ನೆರವೇರಿಸಿ ಮಕ್ಕಳಿಗೆ ಕುಟುಂಬಸ್ಥರಿಗೆ ನಾಗರ ದೋಷ ನಿವಾರಣೆ ಆಗಲಿ ಎಂದು ನೂಲಿನ ದಾರವನ್ನು ಕೈಗೆ, ಕೊರಳಿಗೆ ಕಟ್ಟಿ, ಕೊಬ್ಬರಿಗೆ ದಾರ ಹಾಕಿ ಮಕ್ಕಳಿಗೆ ಆಡಲು ನೀಡಿದ್ದು ವಿಶೇಷವಾಗಿತ್ತು.

ಮನೆಯ ಅಂಗಳದ ಗಿಡ–ಮರಗಳ ಟೊಂಗೆ, ಮನೆಯ ಆವರಣದ ಕಬ್ಬಿಣದ ಕೊಂಡಿಗಳಿಗೆ ಜೋಕಾಲಿ ಕಟ್ಟಿ ಹಾಡುಗಳನ್ನು ಹಾಡುತ್ತ ಕುಣಿದು ಕುಪ್ಪಳಿಸಿದರು. ಸಾಹಸ ಗ್ರಾಮೀಣ ಕ್ರೀಡೆಗಳಲ್ಲಿ ಯುವಕ, ಯುವತಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.