
ಪ್ರಜಾವಾಣಿ ವಾರ್ತೆ
ರಾಯಚೂರು: ರಾಯಚೂರಿನ ಎಲ್.ಬಿ.ಎಸ್ ನಗರ ವ್ಯಾಪ್ತಿಯ ಅಲ್ಲಮಪ್ರಭು ಕಾಲೊನಿಯ ತಾಯಮ್ಮ ದೇವಸ್ಥಾನದಲ್ಲಿ ಗುರುವಾರ ಸಂಜೆ ಹುಂಡಿಯಲ್ಲಿನ ಹಣ ಕಳವು ಮಾಡಲಾಗಿದೆ.
ಹುಂಡಿ ಒಡೆದ ಕಿಡಿಗೇಡಿಗಳು ಹುಂಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದಾರೆ. ದೇವಸ್ಥಾನ ಸಮಿತಿಯಿಂದ ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿದೆ.
‘ಹುಂಡಿಯಲ್ಲಿ ಎಷ್ಟು ಮೊತ್ತದ ಹಣವಿತ್ತು ಎಂಬ ಅಂದಾಜಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.