ಕವಿತಾಳ: ‘ಟಿಕೆಟ್ ವಿಚಾರ ಸಂಬಂಧ ಪಕ್ಷದ ಮುಖಂಡರಲ್ಲಿ ಯಾವುದೇ ಗೊಂದಲ, ಅಸಮಧಾನವಿಲ್ಲ. ಎಲ್ಲಾ ಹಿರಿಯ ಮುಖಂಡರು ಚುನಾವಣೆಯಲ್ಲಿ ತಮ್ಮ ಪರ ಕೆಲಸ ಮಾಡುವ ಭರವಸೆ ಇದೆʼ ಎಂದು ಕೊಪ್ಪಳ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು.
ಸಮೀಪದ ಅಮೀನಗಡ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜತೆ ಚರ್ಚೆ ನಡೆಸಿದರು.
‘ಶಾಸಕ ಜನಾರ್ದನರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಅವರು ಈಗಾಗಲೇ ತಮ್ಮ ಪರವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಸಂಸದ ಸಂಗಣ್ಣ ಕರಡಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುರಿತು ನನಗೆ ಮಾಹಿತಿ ಇಲ್ಲʼ ಎಂದರು. ಕ್ಷೇತ್ರದ ವಿವಿಧೆಡೆ ಪ್ರವಾಸ ಕೈಗೊಂಡಿದ್ದು ಪಕ್ಷದ ಕಾರ್ಯಕರ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಮುಖಂಡರಾದ ಗಿರೆಗೌಡ ಪಾಟೀಲ, ಕೆ.ಕರಿಯಪ್ಪ ಸಿಂಧನೂರು, ವಿಶ್ವನಾಥರೆಡ್ಡಿ ಅಮೀನಗಡ, ಚಂದ್ರು ಜಹಗೀರದಾರ ಪಾಮನಕಲ್ಲೂರು, ಲಕ್ಷ್ಮಣ ನಾಯಕ, ಶಿವಕುಮಾರ ಪಾಟೀಲ, ಶಶಿಧರ ಜಂಗಮರಹಳ್ಳಿ, ಬಸವರಾಜ ಇರಕಲ್, ಹುಚ್ಚಬುಡ್ಡ ತಳವಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.