ಕವಿತಾಳ: ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಉಮಳಿ ತುಪ್ಪದೂರು ಗ್ರಾಮದ ಹತ್ತಿರ ಸೋಮವಾರ ಸಂಜೆ ಸಿಡಿಲು ಬಡಿದು 20 ಕುರಿಗಳು ಮತ್ತು ಒಂದು ನಾಯಿ ಸಾವನ್ನಪ್ಪಿದೆ.
ಕುರಿಗಳು ತುಪ್ಪದೂರು ಗ್ರಾಮದ ದೇಸಪ್ಪ ಚನ್ನಪ್ಪ ಅವರಿಗೆ ಸೇರಿದ್ದು, ಕುರಿ ಮೇಯಿಸಲು ತೆರಳಿದ್ದಾಗ ಅಮರಯ್ಯ ದೇವಸ್ಥಾನದ ಹತ್ತಿರದ ಜಮೀನಿನಲ್ಲಿ ಸಿಡಿಲು ಬಡಿದಿದೆ. ಕುರಿ ಹಿಂದೆ ಇದ್ದ ದೇಸಪ್ಪ ಅವರಿಗೆ ತೊಂದರೆಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.