
ಸಿರವಾರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ 22ನೇ ತ್ರೈಮಾಸಿಕ ಮಹಾಅಧಿವೇಶನ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆಯಲ್ಲಿ 36 ಮತಗಳನ್ನು ಪಡೆಯುವ ಮೂಲಕ ಕಿರಿಯ ಸಹಾಯಕ ತಿಮ್ಮಾರೆಡ್ಡಿ ನೂತನ ಸದಸ್ಯರಾಗಿ ಆಯ್ಕೆಯಾದರು.
ಬುಧವಾರ ಜೆಸ್ಕಾಂ ಇಲಾಖೆ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಜೆಸ್ಕಾಂ ಇಲಾಖೆಯ ಸಿರವಾರ ಕಿರಿಯ ಸಹಾಯಕ ತಿಮ್ಮಾರೆಡ್ಡಿ, ಜೆಸ್ಕಾಂ ಇಲಾಖೆಯ ಕವಿತಾಳ ಹಿರಿಯ ಸಹಾಯಕ ನಾಗರಾಜ ಚುನಾವಣೆಗೆ ಸ್ಪರ್ಧಿಸಿದ್ದರು.
ಒಟ್ಟು 67 ಮತದಾರರಲ್ಲಿ 66 ಮತದಾನವಾಗಿದ್ದು 36 ಮತ ಪಡೆದ ತಿಮ್ಮಾರೆಡ್ಡಿ ಜಯಶಾಲಿಯಾದರೆ, 30 ಮತ ಪಡೆದು ನಾಗರಾಜ ಸೋಲು ಅನುಭವಿಸಿದರು.
ಚುನಾವಣೆ ಅಧಿಕಾರಿಯಾಗಿ ಎಂ.ಡಿ.ಶರೀಫ್ ಕರ್ತವ್ಯ ನಿರ್ವಹಿಸಿದರು
ಸನ್ಮಾನ: ನೂತನ ಸದಸ್ಯರಾಗಿ ಆಯ್ಕೆಯಾದ ತಿಮ್ಮರೆಡ್ಡಿ ಅವರಿಗೆ ಜೆಸ್ಕಾಂ ಅಧಿಕಾರಿಗಳು ಸನ್ಮಾನಿಸಿದರು.
ಶಿವಮೂರ್ತಿ, ಪಂಪಣ್ಣಗೌಡ, ಪ್ರಭಾಕರ ಪಾಟೀಲ, ಮಹೇಶ ಕುಮಾರ, ಅಮರೇಶ, ಮಂಜುನಾಥ ಪೋಲಿಸ್ ಪಾಟೀಲ, ಗುರುಪಾದ, ಕರಿಯಪ್ಪ, ಗಾದಿಲಿಂಗಪ್ಪ, ವಿರುಪಾಕ್ಷಿ ಉಪಸ್ಥಿತದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.