ADVERTISEMENT

ನೀರುಗಳ್ಳರ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 15:07 IST
Last Updated 28 ಜುಲೈ 2020, 15:07 IST

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) 55 ರ ಮೇಲ್ಭಾಗದಲ್ಲಿ ಅತಿಹೆಚ್ಚು ಅಕ್ರಮ ಪಂಪಸೆಟ್‌ಗಳನ್ನು ಜೋಡಿಸಲಾಗಿದ್ದು, ಕೂಡಲೇ ನೀರುಗಳ್ಳರ ವಿರುದ್ಧ ಕ್ರಿಮಿನಲ್‌ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕಾಲುವೆ ಬಲಭಾಗದ ಪ್ರದೇಶಗಳಲ್ಲಿ ಕೆರೆಗಳು, ಭಾವಿಗಳನ್ನು ನಿರ್ಮಿಸಿಕೊಂಡು ಅಕ್ರಮವಾಗಿ ನೀರು ಭರ್ತಿ ಮಾಡಲಾಗುತ್ತಿದೆ. ಈ ಪಂಪ್‌ಸೆಟ್‌ಗಳಿರುವ ಕಾರಣದಿಂದ ಕಾಲುವೆ ಕೆಳಭಾಗಕ್ಕೆ ನೀರು ತಲುಪುತ್ತಿಲ್ಲ. ವಾರಾಬಂಧಿ ಮಾಡಿಕೊಂಡು, ಕೆಳಭಾಗಕ್ಕೂ ನೀರು ಒದಗಿಸುವ ಕೆಲಸ ಮಾಡಬೇಕು ಎಂದು ಕೇಳಿಕೊಳ್ಳಲಾಗಿದೆ.

ಅಕ್ರಮ ನೀರಾವರಿ ಬಗ್ಗೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಇದರಿಂದ ಅಕ್ರಮ ನೀರಾವರಿಯೂ ಹೆಚ್ಚಾಗುತ್ತಿವೆ. ಕಾಲುವೆ ಕೆಳಭಾಗದ ರೈತರು ಹೋರಾಟ ಮಾಡುವುದು ತಪ್ಪುತ್ತಿಲ್ಲ. ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ADVERTISEMENT

ಪದಾಧಿಕಾರಿಗಳಾದ ಎಂ.ಗಂಗಾಧರ, ಅಮಿನ್‌ ಪಾಷಾ ದಿದ್ದಗಿ, ಭೀಮಯ್ಯ ಜಾಲವಾಡಗಿ, ಚೆನ್ನಾರೆಡ್ಡಿ, ನಿಂಗಪ್ಪ ನಾಯಕ, ಸಿದ್ದನಗೌಡ, ರಾಜರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.