ADVERTISEMENT

ಮಠಗಳ ತ್ರಿವಿಧ ದಾಸೋಹ ಶ್ಲಾಘನೀಯ: ಬಿ.ವೈ.ವಿಜಯೇಂದ್ರ

ಮಾನ್ವಿ: ಕಲ್ಮಠದ ಸುವರ್ಣ ದಸರಾ ಮಹೋತ್ಸವ, ಸರ್ವಧರ್ಮ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 7:14 IST
Last Updated 3 ಅಕ್ಟೋಬರ್ 2025, 7:14 IST
ಮಾನ್ವಿ ಕಲ್ಮಠದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಕಲ್ಮಠದ ಪೀಠಾಧ್ಯಕ್ಷ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಿದರು
ಮಾನ್ವಿ ಕಲ್ಮಠದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಕಲ್ಮಠದ ಪೀಠಾಧ್ಯಕ್ಷ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಿದರು   

ಮಾನ್ವಿ: ‘ಹಲವು ದಶಕಗಳಿಂದ ನಾಡಿನ ಎಲ್ಲ ಸಮುದಾಯಗಳ ಮಕ್ಕಳಿಗೆ ಅನ್ನ, ಅಕ್ಷರ ಹಾಗೂ ಜ್ಞಾನದ ತ್ರಿವಿಧ ದಾಸೋಹ ನಿರ್ವಹಿಸುತ್ತಿರುವ ವೀರಶೈವ ಲಿಂಗಾಯತ ಸಮುದಾಯದ ಮಠ ಮಾನ್ಯಗಳ ಕೊಡುಗೆ ಶ್ಲಾಘನೀಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಮಂಗಳವಾರ ಸಂಜೆ ಕಲ್ಮಠದ ಸುವರ್ಣ ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸರ್ವ ಧರ್ಮಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.

ADVERTISEMENT

ಮಸ್ಕಿಯ ಸೂಲಗಿತ್ತಿ ಶಿವುಬಾಯಿ ಬಸನಗೌಡ ಪಾಟೀಲ ಅವರಿಗೆ ಕಲ್ಮಠದ ಸುವರ್ಣ ದಸರಾ ಸಾಧಕ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ವಿರೂಪಾಕ್ಷಯ್ಯ ವಂದಲಿ ಅವರಿಗೆ ವಿಶೇಷ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಿಲೋಗಲ್ ಬೃಹನ್ಮಠದ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಚೀಲಪರ್ವಿಯ ಸದಾಶಿವ ಸ್ವಾಮೀಜಿ, ಹಜರತ್ ಖಾದರಲಿಂಗ ಸಾಹೇಬ್, ಕೌತಾಳಂನ ಹಜರತ್ ಖ್ಜಾಜಾ ಸೈಯಾದ್ ಶಾಹ ಜೈನುಲಾಬೆದಿನ್ ಹುಸೇನ್ ಚಿಸ್ತಿ ಸಜ್ಜಾದ್ ನಾಶೀನ್ ಮತವಾಲೆ, ವಸಂತನಾಥ ಜೋಗಿ ಹಾಗೂ ಫಾದರ್ ಸುರೇಶ ವಿನ್ಸೆಂಟ್ ಧರ್ಮ ಸಂದೇಶ ನೀಡಿದರು.

ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ, ಮಾಜಿ ಸಂಸದರಾದ ಜೆ.ವಿರೂಪಾಕ್ಷಪ್ಪ ಹಾಗೂ ಬಿ.ವಿ.ನಾಯಕ, ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ಪ್ರತಾಪಗೌಡ ಹಾಗೂ ತಿಪ್ಪರಾಜು ಹವಾಲ್ದಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.