ಕವಿತಾಳ: ಪಟ್ಟಣದ 5ನೇ ವಾರ್ಡ್‌ಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂದು ಆರೋಪಿಸಿದ ನಿವಾಸಿಗಳು ಸೋಮವಾರ ಪಟ್ಟಣ ಪಂಚಾಯಿತಿ ಮುಂದೆ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.
ವಾರ್ಡ್ ನಿವಾಸಿ ಎಸ್.ಎಂ.ಜಾವಿದ್ ಮಾತನಾಡಿ, ವಾರ್ಡ್‌ನ ಸುಮಾರು 40 ಮನೆಗಳಿಗೆ ಕಳೆದ ಮೂರು ವರ್ಷಗಳಿಂದ ನೀರಿನ ಸಮಸ್ಯೆ ಕಾಡುತ್ತಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ‘ಈಚೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದರಿಂದ ಪೈಪ್‌ಲೈನ್ ಅಳವಡಿಸಲು ತೊಂದರೆ ಆಗುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಪ.ಪಂ ಸದಸ್ಯ ರುಕ್ಮುದ್ದೀನ್ ಮುಖ್ಯಾ ಧಿಕಾರಿ ಜತೆ ದೂರವಾಣಿ ಮೂಲಕ ಮಾತನಾಡಿ, ‘ಬೇರೆ ಕಡೆ ಯಿಂದ ಪೈಪ್‌ಅಳವಡಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ವಾರ್ಡ್ ನಿವಾಸಿಗಳಾದ ರಸೂಲ್, ಮಹಮದ್, ಆರೀಫ್, ತೈನಿಯತ್, ಮೆಹಮೂದಾ ಬೇಗಂ, ರೇಷ್ಮಾ, ಖಾಜಾಬೀ, ಶಮೀನಾ, ಜೇಶನ್, ರೇಶ್ಮಾ ಬೇಗಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.