ADVERTISEMENT

ವಿಶ್ವಕರ್ಮರು ಕಲೆ, ಸಂಸ್ಕೃತಿಯ ರೂವಾರಿಗಳು: ಶಾಸಕ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 14:30 IST
Last Updated 4 ಜನವರಿ 2019, 14:30 IST
ರಾಯಚೂರಿನಲ್ಲಿ ಗುರುವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿದರು
ರಾಯಚೂರಿನಲ್ಲಿ ಗುರುವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿದರು   

ರಾಯಚೂರು: ಬೇಲೂರಿನ ಚನ್ನಕೇಶವ ದೇವಸ್ಥಾನ ದೇಶ– ವಿದೇಶದ ಜನರ ಗಮನ ಸೆಳೆಯಲು ಕಾರಣವಾಗಿರುವ ಅಮರಶಿಲ್ಪಿ ಜಕಣಾಚಾರಿ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮರು ಕಲೆ, ಸಂಸ್ಕೃತಿಯ ರೂವಾರಿಗಳಾಗಿದ್ದಾರೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮುದಾಯದದಿಂದ ಗುರುವಾರ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ, ಕ್ಯಾಲೆಂಡರ್ ಬಿಗುಗಡೆಗೊಳಿಸಿ ಮಾತನಾಡಿದರು.

ವಿಶ್ವಕರ್ಮರು ಬುದ್ಧಿ ಜೀವಿಗಳಾಗಿದ್ದು ಅವರು ನಿರ್ಮಿಸಿರುವ ಬೇಲೂರಿನ ದೇವಸ್ಥಾನದ ಶಿಲ್ಪಕಲೆ ಅದ್ಭುತವಾಗಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ಡಾ.ಮನೋಹರ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಸತೀಶ, ಕೆ.ಸಿ.ವೀರೇಶ, ಶೇಖರ ವಾರದ, ವೆಂಕಟೇಶ ಗಿರಿಬಾಬು, ಮಾಧುರಿ, ಬಿಜೆಪಿ ಮಹಿಳಾ ಘಟಕ ಅಧ್ಯಕ್ಷೆ ವಿಜಯರಾಜೇಶ್ವರಿ, ಶರಣಮ್ಮ ಕಾಮರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೆ.ಲಕ್ಷ್ಮೀಪತಿ ಯರಗೇರಾ, ರವೀಂದ್ರಕುಮಾರ, ಗೋವರ್ಧನ, ಮಲ್ಲಿಕಾರ್ಜುನ, ಮೌನೇಶ ಆಚಾರಿ, ವೀರೇಶ ಬಡಿಗೇರ ಇದ್ದರು. ಮಾರುತಿ ಬಡಿಗೇರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.